ಮನವ ಶೋಧಿಸಬೇಕೋ (ಶ್ರೀ ಪುರಂದರದಾಸರು)

ಮನವ ಶೋಧಿಸಬೇಕೋ ನಿಚ್ಚ
ದಿನದಿನವು ಮಾಡುವ ಪಾಪಪುಣ್ಯದ ವೆಚ್ಚ || ಪ ||

ಧರ್ಮ-ಅಧರ್ಮ ವಿಂಗಡಿಸಿ ನೀ
ಅಧರ್ಮದ ನರಗಳ ಬೇರೆ ಕತ್ತರಿಸಿ
ನಿರ್ಮಲಾಚಾರವ ಚರಿಸಿ ಪರ
ಬ್ರಹ್ಮ ಮೂರುತಿ ಪಾದಕಮಲವ ಭಜಿಸಿ || ೧ ||

ತನುವ ಖಂಡಿಸಿ ಒಮ್ಮೆ ಮಾಣೋ ನಿನ್ನ
ಮನವ ದಂಡಿಸಿ ಪರಮಾತ್ಮನ್ನ ಕಾಣೋ
ಕೊನೆಗೆ ನಿನ್ನೊಳು ನೀನೇ ಜಾಣೋ ಮುಕ್ತಿ
ನಿನಗೆ ದೂರಿಲ್ಲವೋ ಅದೇ ಒಂದು ಗೇಣೋ || ೨ ||

ಆತನ್ನ ನಂಬಿ ಕೇಡಿಲ್ಲ ಅವ
ಪಾತಕ ಪತಿತ ಸಂಗವ ಮಾಳ್ವನಲ್ಲ
ನೀತಿವಂತರೆ ಕೇಳಿರೆಲ್ಲ ನಮ-
ಗಾತನೆ ಗತಿಯೀವ ಪುರಂದರ ವಿಠಲ || ೩ ||

ತೊರೆದು ಜೀವಿಸಬಹುದೆ (ಶ್ರೀ ಕನಕದಾಸರು)

ತೊರೆದು ಜೀವಿಸಬಹುದೆ (ಶ್ರೀಕನಕದಾಸರು)ರಾಗ – ಮುಖಾರಿ                   ತಾಳ – ಏಕ

ತೊರೆದು ಜೀವಿಸಬಹುದೆ ಹರಿ ನಿನ್ನ ಚರಣವ
ತೊರೆದು ಜೀವಿಸಬಹುದೆ || ಪ ||

ಬರಿದೆ ಮಾತೇಕಿನ್ನು ಅರಿತು ಪೇಳುವೆನಯ್ಯ
ಕರಪಿಡಿದೆನ್ನನು ಕಾಯೊ ಕರುಣಾನಿಧಿ || ಅ.ಪ ||

ತಾಯಿ ತಂದೆಯ ಬಿಟ್ಟು ತಪವ ಮಾಡಲು ಬಹುದು
ದಾಯಾದಿ ಬಂಧುಗಳ ಬಿಡಲು ಬಹುದು
ರಾಯ ಮುನಿದರೆ ರಾಜ್ಯವ ಬಿಡಬಹುದು
ಕಾಯಜಪಿತ ನಿನ್ನಡಿಯ ಬಿಡಲಾಗದು || ೧ ||

ಒಡಲು ಹಸಿದರೆ ಅನ್ನವ ಬಿಡಬಹುದು
ಪಡೆದ ಕ್ಷೇತ್ರವ ಬಿಟ್ಟು ಹೊರಡಲು ಬಹುದು
ಮಡದಿ ಮಕ್ಕಳ ಕಡೆಗೆ ತೊಲಗಿಸಿಬಿಡಬಹುದು
ಕಡಲೊಡೆಯ ನಿಮ್ಮಡಿಯ ಘಳಿಗೆ ಬಿಡಲಾಗದು || ೨ ||

ಪ್ರಾಣವ ಪರರಿಗೆ ಬೇಡಿದರೆ ಕೊಡಬಹುದು
ಮಾನಾಭಿಮಾನವ ತಗ್ಗಿಸಬಹುದು
ಪ್ರಾಣದಾಯಕನಾದ ಆದಿಕೇಶವರಾಯ
ಜಾಣ ಶ್ರೀಕೃಷ್ಣ ನಿನ್ನಡಿಯ ಬಿಡಲಾಗದು || ೩ ||

ಶ್ರೀ ತುಲಸೀಮಾಹಾತ್ಮ್ಯಮ್

 

shri-krishna-foot-tulsi-small

ಶ್ರೀತುಲಸೀಮಾಹಾತ್ಮ್ಯಮ್

ಶ್ರೀತುಲಸೀಮಾಹಾತ್ಮ್ಯಮ್  

ಪಾಪಾನಿ ಯಾನಿ ರವಿಸೂನುಪಟಸ್ಥಿತಾನಿ
ಗೋಬ್ರಹ್ಮಬಾಲಪಿತೃಮಾತೃವಧಾದಿಕಾನಿ |
ನಶ್ಯಂತಿ ತಾನಿ ತುಲಸೀವನದರ್ಶನೇನ
ಗೋಕೋಟಿದಾನಸದೃಶಂ ಫಲಮಾಪ್ನುವಂತಿ || ೧ ||

ಪುಷ್ಕರಾದ್ಯಾನಿ ತೀರ್ಥಾನಿ ಗಂಗಾದ್ಯಾಃ ಸರಿತಸ್ಥತಾ |
ವಾಸುದೇವಾದಯೋ ದೇವಾ ವಸಂತಿ ತುಲಸೀವನೇ || ೨ ||

ತುಲಸೀಕಾನನಂ ಯತ್ರ ಯತ್ರ ಪದ್ಮವನಾನಿ ಚ |
ವಸಂತಿ ವೈಷ್ಣವಾ ಯತ್ರ ತತ್ರ ಸನ್ನಿಹಿತೋ ಹರಿಃ || ೩ ||

ಯನ್ಮೂಲೇ ಸರ್ವತೀರ್ಥಾನಿ ಯನ್ಮಧ್ಯೇ ಸರ್ವದೇವತಾಃ |
ಯದಗ್ರೇ ಸರ್ವವೇದಾಶ್ಚ ತುಲಸಿ ತ್ವಾಂ ನಮಾಮ್ಯಹಮ್ || ೪ ||
ತುಲಸಿ ಶ್ರೀಸಖಿ ಶುಭೇ ಪಾಪಹಾರಿಣಿ ಪುಣ್ಯದೇ |
ನಮಸ್ತೇ ನಾರದನುತೇ ನಾರಾಯಣಮನಃಪ್ರಿಯೇ || ೫ ||

ರಾಜದ್ವಾರೇ ಸಭಾಮಧ್ಯೇ ಸಂಗ್ರಾಮೇ ಶತ್ರುಪೀಡನೇ |
ತುಲಸೀಸ್ಮರಣಂ ಕುರ್ಯಾತ್ ಸರ್ವತ್ರ ವಿಜಯೀ ಭವೇತ್ || ೬ ||

ತುಲಸ್ಯಮೃತಜನ್ಮಾಽಸಿ ಸದಾ ತ್ವಂ ಕೇಶವಪ್ರಿಯೇ |
ಕೇಶವಾರ್ಥೇ ಚಿನೋಮಿ ತ್ವಾಂ ವರದಾ ಭವ ಶೋಭನೇ || ೭ ||

ಮೋಕ್ಷೈಕಹೇತೋರ್-ಧರಣೀ-ಧರಸ್ಯ ವಿಷ್ಣೋಃ  
ಸಮಸ್ತಸ್ಯ ಗುರೋಃ ಪ್ರಿಯಸ್ಯ |  
ಆರಾಧನಾರ್ಥಂ ಪುರುಷೋತ್ತಮಸ್ಯ  
ಛಿಂದೇ ದಲಂ ತೇ ತುಲಸಿ ಕ್ಷಮಸ್ವ || ೮ ||

ಕೃಷ್ಯಾರಂಭೇ ತಥಾ ಪುಣ್ಯೇ ವಿವಾಹೇ ಚಾರ್ಥಸಂಗ್ರಹೇ |
ಸರ್ವಕಾರ್ಯೇಷು ಸಿದ್ದ್ಯರ್ಥಂ ಪ್ರಸ್ಥಾನೇ ತುಲಸೀಂ ಸ್ಮರೇತ್ || ೯ ||

ಯಃ ಸ್ಮರೇತ್ ತುಲಸೀಂ ಸೀತಾಂ ರಾಮಂ ಸೌಮಿತ್ರಿಣಾ ಸಹ |
ವಿನಿರ್ಜಿತ್ಯ ರಿಪೂನ್ ಸರ್ವಾನ್ ಪುನರಾಯಾತಿ ಕಾರ್ಯಕೃತ್ || ೧೦ ||

ಯಾ ದೃಷ್ಟಾ ನಿಖಿಲಾಘಸಂಘಶಮನೀ ಸ್ಪೃಷ್ಟಾ ವಪುಃಪಾವನೀ  
ರೋಗಾಣಾಮಭಿವಂದಿತಾ ನಿರಸನೀ ಸಿಕ್ತಾಽಂತಕತ್ರಾಸಿನೀ |  
ಪ್ರತ್ಯಾಸತ್ತಿವಿಧಾಯಿನೀ ಭಗವತಃ ಕೃಷ್ಣಸ್ಯ ಸಂರೋಪಿತಾ  
ನ್ಯಸ್ತಾ ತಚ್ಚರಣೇ ವಿಮುಕ್ತಿಫಲದಾ ತಸ್ಯೈ ತುಲಸ್ಯೈ ನಮಃ || ೧೧ ||  

ಖಾದನ್ ಮಾಂಸಂ ಪಿಬನ್ ಮದ್ಯಂ ಸಂಗಚ್ಛನ್ನಂತ್ಯಜಾದಿಭಿಃ |
ಸದ್ಯೋ ಭವತಿ ಪೂತಾತ್ಮಾ ಕರ್ಣಯೋಸ್ತುಲಸೀಂ ಧರನ್ || ೧೨ ||

ಚತುಃ ಕರ್ಣೇ ಮುಖೇ ಚೈಕಂ ನಾಭಾವೇಕಂ ತಥೈವ ಚ |  
ಶಿರಸ್ಯೇಕಂ ತಥಾ ಪ್ರೋಕ್ತ ತೀರ್ಥೇ ತ್ರಯಮುದಾಹೃತಮ್ || ೧೩ ||  
 
ಅನ್ನೋಪರಿ ತಥಾ ಪಂಚ ಭೋಜನಾಂತೇ ದಲತ್ರಯಮ್ |  
ಏವಂ ಶ್ರೀತುಲಸೀಂ ಗ್ರಾಹ್ಯಾ ಅಷ್ಟಾದಶದಲಾ ಸದಾ || ೧೪ ||  

|| ಇತಿ ಶ್ರೀತುಲಸೀಮಾಹಾತ್ಮ್ಯಮ್ ||

ರಾಯಬಾರೊ ತಂದೆತಾಯಿ ಬಾರೊ (ಶ್ರೀ ಜಗನ್ನಾಥ ದಾಸರು)

ರಾಯಬಾರೊ ತಂದೆತಾಯಿ ಬಾರೊರಾಗ – ಆನಂದಭೈರವಿ        ತಾಳ – ಏಕತಾಳ

ರಾಯಬಾರೊ ತಂದೆತಾಯಿ ಬಾರೊ
ನಮ್ಮ ಕಾಯಿ ಬಾರೊ
ಮಾಯಿಗಳ ಮರ್ದಿಸಿದ ರಾಘವೇಂದ್ರ || ಪ ||

ವಂದಿಪ ಜನರಿಗೆ ಮಂದಾರ ತರುವಂತೆ
ಕುಂದದಭೀಷ್ಟೆಯ ಸಲಿಸುತಿಪ್ಪ ಸುರಮುನಿ
ಮಂದನ ಮತಿಗೆ ರಾಘವೇಂದ್ರ || ೧ ||

ಭಾಸುರಚರಿತನೆ ಭೂಸುರವಂದ್ಯನೆ
ಶ್ರೀಸುಧೀಂದ್ರಾರ್ಯರ ವರಪುತ್ರನೆನಿಸಿದ
ದೇಶಿಕರೊಡೆಯ ರಾಘವೇಂದ್ರ || ೨ ||

ರಾಮಪದಸರಸೀರುಹಭೃಂಗ ಕೃಪಾಂಗ
ಭ್ರಾಮಕಜನರ ಮತಭಂಗ ಮಾಡಿದ
ಧೀಮಂತರೊಡೆಯನೆ ರಾಘವೇಂದ್ರ || ೩ ||

ಆರು ಮೂರೇಳು ನಾಲ್ಕೆಂಟು ಗ್ರಂಥಸಾರಾರ್ಥ
ತೋರಿಸಿದೆ ಸರ್ವರಿಗೆ ಸರ್ವಜ್ಞ
ಸೂರಿಗಳರಸನೆ ರಾಘವೇಂದ್ರ || ೪ ||

ಭೂತಳನಾಥನ ಭೀತಿಯ ಬಿಡಿಸಿದೆ
ಪ್ರೇತತ್ವ ಕಳೆದೆ ಮಹಿಷಿಯ ಶ್ರೀಜಗ-
ನ್ನಾಥವಿಠಲನ ಪ್ರೀತಿಪಾತ್ರ ರಾಘವೇಂದ್ರ || ೫ ||

ಅಪಮೃತ್ಯು ಪರಿಹರಿಸೋ ಅನಿಲದೇವ (ಶ್ರೀ ಜಗನ್ನಾಥ ದಾಸರು)

ರಾಗ – ಕಾಂಬೋದಿ              ತಾಳ – ಝಂಪೆ

ಮುಖ್ಯಪ್ರಾಣ ದೇವರು ಉಡುಪಿಅಪಮೃತ್ಯು ಪರಿಹರಿಸೋ ಅನಿಲದೇವ
ಕೃಪಣವತ್ಸಲನೆ ಕಾವರ ಕಾಣೆ ನಿನ್ನುಳಿದು || ಪ ||

ನಿನಗಿನ್ನು ಸಮರಾದ ಅನಿಮಿತ್ತ ಬಂಧುಗಳು
ಎನಗಿಲ್ಲ ಆವಾವ ಜನುಮದಲ್ಲಿ
ಅನುದಿನದಲೆನ್ನುದಾಸೀನ ಮಾಡುವುದು
ನಿನಗೆ ಅನುಚಿತೋಚಿತವೆ ಸಜ್ಜನಶಿಖಾಮಣಿಯೆ || ೧ ||

ಕರಣಾಭಿಮಾನಿಗಳು ಕಿಂಕರರು ಮೂರ್ಲೋಕದರಸು
ಹರಿಯು ನಿನ್ನೊಳಗಿಪ್ಪ ಸರ್ವಕಾಲ
ಪರಿಸರನೆ ಈ ಭಾಗ್ಯ ದೊರೆತನಕೆ ಸರಿಯುಂಟೆ
ಗುರುವರ್ಯ ನೀ ದಯಾಕರನೆಂದು ಪ್ರಾರ್ಥಿಸುವೆ || ೨ ||

ಭವರೋಗ ಮೋಚಕನೆ ಪವಮಾನರಾಯ ನಿ
ನ್ನವರವನು ನಾನು ಮಾಧವಪ್ರಿಯನೆ
ಜವನ ಬಾಧೆಯ ಬಿಡಿಸೋ ಅವನಿಯೊಳು ಸುಜನರಿಗೆ
ದಿವಿಜಗಣ ಮಧ್ಯದಲಿ ಪ್ರವರ ನೀನಹುದೊ || ೩ ||

ಜ್ಞಾನವಾಯುರೂಪಕನೆ ನೀನಹುದೊ ವಾಣಿ ಪಂಚಾ
ನನಾದ್ಯಮರರಿಗೆ ಪ್ರಾಣದೇವ
ದೀನವತ್ಸಲನೆಂದು ನಾ ನಿನ್ನ ಮರೆಹೊಕ್ಕೆ
ದಾನವಾರಣ್ಯಕೃಶಾನು ಸರ್ವದಾ ಎನ್ನ || ೪ ||

ಸಾಧನ ಶರೀರವಿದು ನೀ ದಯದಿಕೊಟ್ಟದ್ದು
ಸಾಧಾರಣವಲ್ಲ ಸಾಧುಪ್ರಿಯ
ವೇದವಾದೋದಿತ ಜಗನ್ನಾಥವಿಠಲ
ಪಾದಭಕುತಿಯ ಕೊಟ್ಟು ಮೋದವನು ಕೊಡು ಸತತ || ೫ ||

ಹ್ಯಾಂಗೆ ಬರೆದಿತ್ತೊ ಪ್ರಾಚೀನದಲ್ಲಿ (ಶ್ರೀ ಪುರಂದರದಾಸರು)

ಹ್ಯಾಂಗೆ ಬರೆದಿತ್ತೊ ಪ್ರಾಚೀನದಲ್ಲಿ
ಹಾಂಗೆ ಇರಬೇಕು ಸಂಸಾರದಲ್ಲಿ || ಪ ||

ಪಕ್ಷಿ ಅಂಗಳದಲ್ಲಿ ಬಂದು ಕೂತಂತೆ
ಆ ಕ್ಷಣದಲ್ಲಿ ಅದು ಹಾರಿಹೋದಂತೆ || ೧ ||

ಸಂತೆ ನೆರೆಯಿತು ನಾನಾ ಪರಿ
ತಿರುಗಿ ಹಿಡಿಯಿತು ತಮ್ಮ ತಮ್ಮ ದಾರಿ || ೨ ||

ಆಡುವ ಮಕ್ಕಳು ಮನೆಯ ಕಟ್ಟಿದರು
ಆಟ ಸಾಕೆಂದು ಮುರಿದೋಡಿದರು || ೩ ||

ವಸತಿಕಾರನು ವಸತಿಗೆ ಬಂದಂತೆ
ಹೊತ್ತಾರೆದ್ದು ಹೊರಟು ಹೋದಂತೆ || ೪ ||

ಸಂಸಾರ ಪಾಶವ ನೀನೇ ಬಿಡಿಸಯ್ಯ
ಕಂಸಾರಿ ಪುರಂದರವಿಠ್ಠಲರಾಯ || ೫ ||

ಶ್ರೀ ಮಂಗಲಾಷ್ಟಕಮ್

ಶ್ರೀಮಂಗಲಾಷ್ಟಕಮ್  

ಲಕ್ಷ್ಮೀರ್ಯಸ್ಯ ಪರಿಗ್ರಹಃ ಕಮಲ-ಭೂಃ ಸೂನುರ್ಗರುತ್ಮಾನ್ ರಥಃ
ಪೌತ್ರಶ್ಚಂದ್ರ-ವಿಭೂಷಣಃ ಸುರ-ಗುರು ಶೇಷಶ್ಚ ಶಯ್ಯಾ ಪುನಃ |
ಬ್ರಹ್ಮಾಂಡಂ ವರ-ಮಂದಿರಂ ಸುರ-ಗಣಾಃ ಯಸ್ಯ ಪ್ರಭೋಃ ಸೇವಕಾಃ
ಸ ತ್ರೈಲೋಕ್ಯ-ಕುಟುಂಬ-ಪಾಲನ-ಪರಃ ಕುರ್ಯಾದ್ಧರಿರ್ಮಂಗಲಮ್ || ೧ ||

ಬ್ರಹ್ಮಾ ವಾಯು-ಗಿರೀಶ-ಶೇಷ-ಗರುಡಾ ದೇವೇಂದ್ರ-ಕಾಮೌ ಗುರು-
ಚಂದ್ರಾರ್ಕೌ ವರುಣಾನಲೌ ಮನು-ಯಮೌ ವಿತ್ತೇಶ-ವಿಘ್ನೇಶ್ವರೌ |
ನಾಸತ್ಯೌ ನಿರೃತಿರ್ಮರುದ್-ಗಣ-ಯುತಾಃ ಪರ್ಜನ್ಯ-ಮಿತ್ರಾದಯಃ
ಸಸ್ತ್ರೀಕಾಃ ಸುರ-ಪುಂಗವಾಃ ಪ್ರತಿ-ದಿನಂ ಕುರ್ವಂತು ನೋ ಮಂಗಲಮ್ || ೨ ||

ವಿಶ್ವಾಮಿತ್ರ-ಪರಾಶರೌರ್ವ-ಭೃಗವೋಽಗಸ್ತ್ಯಃ ಪುಲಸ್ತ್ಯಃ ಕ್ರತುಃ
ಶ್ರೀಮಾನತ್ರಿ-ಮರೀಚ್ಯುಚಥ್ಯ-ಪುಲಹಾಃ ಶಕ್ತಿರ್-ವಸಿಷ್ಠೋಽಂಗಿರಾಃ
ಮಾಂಡವ್ಯೋ ಜಮದಗ್ನಿ-ಗೌತಮ-ಭರದ್ವಾಜಾದಯ-ಸ್ತಾಪಸಾಃ
ಶ್ರೀಮದ್-ವಿಷ್ಣು-ಪದಾಂಬುಜೈಕ-ಶರಣಾಃ ಕುರ್ವಂತು ನೋ ಮಂಗಲಮ್ || ೩ ||

ಮಾಂಧಾತಾ ನಹುಷೋಽಂಬರೀಷ-ಸಗರೌ ರಾಜಾ ಪೃಥುರ್ಹೈಹಯಃ
ಶ್ರೀಮಾನ್ ಧರ್ಮ-ಸುತೋ ನಳೋ ದಶರಥೋ ರಾಮೋ ಯಯಾತಿರ್-ಯದುಃ |
ಇಕ್ಷ್ವಾಕುಶ್ಚ ವಿಭೀಷಣಶ್ಚ ಭರತಶ್ಚೋತ್ತಾನಪಾದ-ಧ್ರುವಾ-
ವಿತ್ಯಾದ್ಯಾ ಭುವಿ ಭೂಭುಜಶ್ಚ ಸತತಂ ಕುರ್ವಂತು ನೋ ಮಂಗಲಮ್ || ೪ ||

ಶ್ರೀ-ಮೇರುರ್ಹಿಮವಾಂಶ್ಚ ಮಂದರ-ಗಿರಿಃ ಕೈಲಾಸ-ಶೈಲಸ್ತಥಾ
ಮಾಹೇಂದ್ರೋ ಮಲಯಶ್ಚ ವಿಂಧ್ಯ-ನಿಷಧೌ ಸಿಂಹಸ್ತಥಾ ರೈವತಃ |
ಸಹ್ಯಾದ್ರಿರ್ವರ-ಗಂಧಮಾದನ-ಗಿರಿರ್ಮೈನಾಕ-ಗೋಮಾಂತಕಾ-
ವಿತ್ಯಾದ್ಯಾ ಭುವಿ ಭೂಧರಾಶ್ಚ ಸತತಂ ಕುರ್ವಂತು ನೋ ಮಂಗಲಮ್ || ೫ ||

ಗಂಗಾ-ಸಿಂಧು-ಸರಸ್ವತೀ ಚ ಯಮುನಾ ಗೋದಾವರೀ ನರ್ಮದಾ
ಕೃಷ್ಣಾ ಭೀಮರಥೀ ಚ ಫಲ್ಗು-ಸರಯೂಃ ಶ್ರೀ-ಗಂಡಕೀ ಗೋಮತೀ |
ಕಾವೇರೀ-ಕಪಿಲಾ-ಪ್ರಯಾಗ-ಕಿಟಿಜಾ-ನೇತ್ರಾವತೀತ್ಯಾದಯೋ
ನದ್ಯಃ ಶ್ರೀಹರಿ-ಪಾದ-ಪಂಕಜ-ಭುವಃ ಕುರ್ವಂತು ನೋ ಮಂಗಲಮ್ || ೬ ||

ವೇದಾಶ್ಚೋಪನಿಷದ್-ಗಣಾಶ್ಚ ವಿವಿಧಾಃ ಸಾಂಗಾಃ ಪುರಾಣಾನ್ವಿತಾ
ವೇದಾಂತಾ ಅಪಿ ಮಂತ್ರ-ತಂತ್ರ-ಸಹಿತಾಸ್ತರ್ಕಾಃ ಸ್ಮೃತೀನಾಂ ಗಣಾಃ |
ಕಾವ್ಯಾಲಂಕೃತಿ-ನೀತಿ-ನಾಟಕ-ಯುತಾಃ ಶಬ್ದಾಶ್ಚ ನಾನಾ-ವಿಧಾಃ
ಶ್ರೀವಿಷ್ಣೋರ್ಗುಣ-ನಾಮ-ಕೀರ್ತನ-ಪರಾಃ ಕುರ್ವಂತು ನೋ ಮಂಗಲಮ್ || ೭ ||

ಆದಿತ್ಯಾದಿ-ನವ-ಗ್ರಹಾಃ ಶುಭ-ಕರಾ ಮೇಷಾದಯೋ ರಾಶಯೋ
ನಕ್ಷತ್ರಾಣಿ ಸ-ಯೋಗಕಾಶ್ಚ ತಿಥಯಸ್ತದ್-ದೇವತಾಸ್ತದ್-ಗಣಾಃ |
ಮಾಸಾಬ್ದಾ ಋತವಸ್ತಥೈವ ದಿವಸಾಃ ಸಂಧ್ಯಾಸ್ತಥಾ ರಾತ್ರಯಃ
ಸರ್ವೇ ಸ್ಥಾವರ-ಜಂಗಮಾಃ ಪ್ರತಿ-ದಿನಂ ಕುರ್ವಂತು ನೋ ಮಂಗಲಮ್ || ೮ ||

ಇತ್ಯೇತದ್ ವರ-ಮಂಗಲಾಷ್ಟಕಮಿದಂ ಶ್ರೀರಾಜರಾಜೇಶ್ವರೇ-
ಣಾಽಖ್ಯಾತಂ ಜಗತಾಮಭೀಷ್ಟ-ಫಲ-ದಂ ಸರ್ವಾಶುಭ-ಧ್ವಂಸನಮ್ |
ಮಾಂಗಲ್ಯಾದಿ-ಶುಭ-ಕ್ರಿಯಾಸು ಸತತಂ ಸಂಧ್ಯಾಸು ವಾ ಯಃ ಪಠೇದ್
ಧರ್ಮಾರ್ಥಾದಿ-ಸಮಸ್ತ-ವಾಂಛಿತ-ಫಲಂ ಪ್ರಾಪ್ನೋತ್ಯಸೌ ಮಾನವಃ || ೯ ||

|| ಇತಿ ಶ್ರೀರಾಜರಾಜೇಶ್ವರಯತಿವಿರಚಿತಂ ಮಂಗಲಾಷ್ಟಕಂ ಸಂಪೂರ್ಣಮ್ ||

ಎದುರಾರೋ ಗುರುವೆ ಸಮನಾರೊ (ಶ್ರೀ ವ್ಯಾಸರಾಯರು)

ರಾಗ: ಆನಂದಭೈರವಿ             ಆದಿತಾಳ

ಎದುರಾರೊ ಗುರುವೆ ಸಮನಾರೊ || ಪ ||
ಮದನಗೋಪಾಲನ ಪ್ರಿಯ ಜಯರಾಯ || ಅ.ಪ ||

ಕಡುಗರ್ಜಿಸುವ ಕೇಸರಿಯಂತೆ ನಿಮ್ಮ ವಾದ-
ಗಡಣೆಯ ಕೇಳುತ ನುಡಿ ಮುಂದೋಡದೆ
ಗಡಗಡ ನಡುಗುತ ಮಾಯ್ಗೋಮಾಯ್ಗಳು
ಅಡವಿಯೋಳಡಗೋರು ನಿಮ್ಮ ಭೀತಿಯಲಿ || ೧ ||

ಕುಟಿಲಮತಗಳೆಂಬೊ ಚಟುಲಂಧಕಾರಕ್ಕೆ
ಪಟುತರ ತತ್ತ್ವಪ್ರಕಾಶಿಕೆಂತೆಂಬ
ಚಟುಲಾತಪದಿಂದ ಖಂಡಿಸಿ ತೇಜೋ-
ತ್ಕಟದಿ ಮೆರೆದೆ ಬುಧಕಟಕಾಬ್ಜಮಿತ್ರ  || ೨ ||

ಅಮಿತದ್ವಿಜಾವಳಿಕುಮುದಗಳರಸಿ
ವಿಮತರ ಮುಖಕಮಲಂಗಳ ಬಾಡಿಸಿ
ಸ್ವಮತರ ಹೃತ್ಸಂತಾಪಗಳೋಡಿಸಿ
ವಿಮಲಸುಕೀರ್ತಿಯ ಪಡೆದೆಯೊ ಚಂದ್ರ || ೩ ||

ವೇದಶಾಸ್ತ್ರಗಳೆಂಬೊ ಶೃಂಗಗಳಿಂದ ಸು-
ಧಾದಿಗ್ರಂಥಗಳೆಂಬೊ ಸ್ತನದಿಂದೊಪ್ಪುತ ತತ್ತ್ವ-
ಬೋಧೆಯೆಂಬ ದುಗ್ಧ ಶಿಷ್ಯವತ್ಸಂಗಳಿಗೆ
ಆದರದಲಿ ಕೊಟ್ಟ ಯತಿಸುರಧೇನು || ೪ ||

ವ್ಯಾಸಸೂತ್ರಗಳೆಂಬ ಮಂದರವನು ವೇದ
ರಾಶಿಯೆಂಬ ವಾರಾಶಿಯೊಳಗಿಟ್ಟು |
ಶ್ರೀಸರ್ವಜ್ಞರ ವಾಕ್ಯಪಾಶದಿ ಸುತ್ತಿ
ಭಾಸುರನ್ಯಾಯಸುಧಾ ಪಡೆದ ಯತೀಂದ್ರ || ೫ ||

ವನಜನಾಭನ ಗುಣಮಣಿಗಳು  ಸರ್ವಜ್ಞ-
ಮುನಿಕೃತಗ್ರಂಥಗಳವನಿಯೊಳಡಗಿರೆ ಸ-
ಜ್ಜನರಿಗೆ ಟೀಕಾಂಜನದಿಂದ ತೋರಿಸಿ
ಘನಸುಖಸಾಧನ ಮಾಡಿದ್ಯೊ ಧೀರ || ೬ ||

ಅರ್ಥಿಮಂದಾರ ವೇದಾರ್ಥವಿಚಾರ ಸ-
ಮರ್ಥ ಶ್ರೀಕೃಷ್ಣ ಪಾದಾಂಬುಜಲೋಲ ಪ್ರ-
ತ್ಯರ್ಥಿಮತ್ತೇಭಕಂಠೀರವಾಕ್ಷೋಭ್ಯ-
ತೀರ್ಥಕರಜ ಜಯತೀರ್ಥಯತೀಂದ್ರ || ೭ ||