ಕುರಿತು

ಧ್ಯಾನವು ಕೃತಯುಗದಿ
ಯಜನಯಜ್ಞವು ತ್ರೇತಾಯುಗದಿ
ದಾನವಾಂತಕನ ದೇವತಾರ್ಚನೆ ದ್ವಾಪರಯುಗದಿ
ಆ ಮಾನವರಿಗೆಷ್ಟು ಫಲವೋ ಅಷ್ಟು ಫಲವು
ಕಲಿಯುಗದಿ ಗಾನದಲಿ ಕೇಶವಯೆನಲು
ಕೈಗೊಡುವನು ರಂಗವಿಠಲ ||

ಮಲಗಿ ಪರಮಾದರದಿ ಪಾಡಲು
ಕುಳಿತು ಕೇಳುವ ಕುಳಿತು ಪಾಡಲು
ನಿಲುವ ನಿಂತರೆ ನಲಿವ ನಲಿದರೆ ಒಲಿವೆ ನಿಮಗೆಂಬ |
ಸುಲಭನೋ ಹರಿ ತನ್ನವರನರ-
ಘಳಿಗೆ ಬಿಟ್ಟಗಲನು ರಮಾಧವ-
ನೊಲಿಸಲರಿಯದೆ ಪಾಮರರು ಬಳಲುವರು ಭವದೊಳಗೆ ||

ನಮ್ಮ ವೈಷ್ಣವ ಸಂಪ್ರದಾಯಗಳಲ್ಲಿ ಸ್ತೋತ್ರ ಸಾಹಿತ್ಯಕ್ಕೆ ಅಪಾರವಾದ ಮಹತ್ವವಿದೆ. ಪಂಡಿತರು, ಪಾಮರರು, ಶಾಸ್ತ್ರ ಪರಿಚಯ ಅಲ್ಪವಾಗಿದ್ದರೂ ನಿತ್ಯದಲ್ಲಿ ತಪ್ಪದೆ ಕೆಲವು ಸ್ತೋತ್ರ-ಮಂತ್ರಗಳನ್ನು ಭಕ್ತಿಪೂರ್ವಕವಾಗಿ ಪಾರಾಯಣ ಮಾಡುವವರು ಬಹಳ. ಸ್ತೋತ್ರ, ಮಂತ್ರ, ಗೀತೆಗಳ ಮಹಿಮೆಯನ್ನು ಕಂಡವರು ನಮ್ಮಲ್ಲಿ ಇವತ್ತಿಗೂ ಇದ್ದಾರೆ, ತಮ್ಮ ಅನುಭವದಿಂದ ನಮಗೆ ಮಾರ್ಗದರ್ಶಕರಾಗಿದ್ದಾರೆ. ಅಂತೆಯೆ ನಮ್ಮಲ್ಲಿ ಅನೇಕ ಸ್ತೋತ್ರ-ಮಂತ್ರ ಸಂಗ್ರಹಗಳು ಲಭ್ಯವಿವೆ. ಎಲ್ಲವನ್ನು ಪಾರಾಯಣ ಮಾಡುವುದು ಅಸಾಧ್ಯ. ಒಂದೊಂದೆ ಸ್ತೋತ್ರಗಳನ್ನು ಹಂತಹಂತವಾಗಿ ಕಲಿಯುವುದು ಸುಲಭದ ಮಾರ್ಗ. ಈ ನಿಟ್ಟಿನಲ್ಲಿ ನನ್ನ ಪ್ರಯತ್ನ “ಸ್ತೋತ್ರ ಸಂಗ್ರಹ”. ಅನೇಕ ಮಹತ್ವಪೂರ್ಣ ಸ್ತೋತ್ರ-ಮಂತ್ರಗಳನ್ನು ನಾನು ಹಂತಹಂತವಾಗಿ ಕೊಡಲಿದ್ದೆನೆ. ಕೆಲಕೃತಿಗಳು ವಿಭಿನ್ನ ಫಲಾದೇಶ ಸಾಧಕಗಳಾಗಿವೆ, ಕೆಲವು ದೋಷ-ವಿಪತ್ಪರಿಹಾರಕಗಳಾಗಿವೆ ಮತ್ತು ಕೆಲೆವು ಸರ್ವಾನುಗ್ರಹಕ್ಕೆ ಸೂಕ್ತವಾಗಿವೆ. ಹೇಗೆ ಪ್ರಾರ್ಥಿಸಿದರು ಭಕ್ತರ ಬಿನ್ನಹವನ್ನು ಪರಮಾತ್ಮನು ಕೇಳಿ, ಅನುಗ್ರಹಿಸುತ್ತಾನೆ.

ಇಂದಿನ ಜೀವನದಲ್ಲಿ ಅನುಕೂಲತೆಗಳು ಹೆಚ್ಚಿದಷ್ಟು ಕಾಲಾಭಾವವೂ ಹೆಚ್ಚಿದೆ. ಗುರುಗಳ, ದೇವತೆಗಳ ಅನುಗ್ರಹ, ಕೃಪೆ ನಮ್ಮ ಐಹಿಕ-ಲೌಕಿಕ ಅಭಿವೃದ್ಧಿಗೆ ಅತ್ಯವಶ್ಯಕ. ಸಾಧ್ಯವಾದಷ್ಟರಿಂದ ಪ್ರಾರಂಭಿಸಿ ನಿರಂತರತೆಯನ್ನು ತಲುಪುವುದೇ ಶ್ರೇಷ್ಟ ಸಾಧನೆ. ಗೊಂದಲಮಯವೂ ಅತೀ ಅಸ್ಥಿರವೂ, ತಾಂತ್ರಿಕವೂ ಆದ ನಮ್ಮ ಜೀವನ ಪ್ರಕ್ರಿಯೆ ತನ್ನ ಅಧ್ಯಾತ್ಮಿಕ ಮುಖವನ್ನು, ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರುವುದು ಅಪಾಯಕಾರಿ. ಅಧ್ಯಾತ್ಮ, ಜೀವನದ ಉನ್ನತ ಮೌಲ್ಯಗಳಿಗೆ, ಸುಸ್ಥಿರತೆಗೆ ಅತ್ಯಂತ ಅವಶ್ಯಕ. ಪ್ರಾಮಾಣಿಕತೆ, ಜೀವದಯೆ, ಸೌಹಾರ್ದಗಳು ಭೌತಿಕತೆಗೆ ವಿರೋಧಾಭಾಸಗಳು. ಇವುಗಳನ್ನು ಕಳೆದುಕೊಳ್ಳುತ್ತಿರುವ ನಾವು ಮುಂದಿನ ಜೀವನದಲ್ಲಿ ಗಳಿಸಿಕೊಳ್ಳುವುದು ಖಿನ್ನತೆ, ದುಃಖಗಳನ್ನು ಮಾತ್ರ. ಆಸ್ತಿಕ್ಯವನ್ನು ಪ್ರಶ್ನಿಸುವ ಹಂತಕ್ಕೆ ತಲುಪಿರುವ ನಾವು ಇನ್ನು ಸ್ವಲ್ಪದರಲ್ಲಿ ಆತ್ಮಹಾನಿಯನ್ನು ಮಾಡಿಕೊಳ್ಳುವುದಂತು ನಿಶ್ಚಿತ.

ಸಂಸ್ಕೃತ ಕೃತಿಗಳು ತನ್ನ ಗೇಯತೆಯಿಂದ ಆಕರ್ಶಕವಾಗಿರುವಂತೆ, ದಾಸವರೇಣ್ಯರ ಕೃತಿಗಳು ಅರ್ಥಾನುಸಂಧಾನಕ್ಕೆ ಸಹಾಯಕವಾಗಿವೆ. ಸಂಸ್ಕೃತ ಕೃತಿಗಳಿಂದ ಆಗುವ ಪ್ರಯೋಜನ ದಾಸರ ಕೃತಿಗಳಿಂದಲೂ ಸಾಧ್ಯ, ಇದರಲ್ಲಿ ಸ್ವಲ್ಪವೂ ಸಂಶಯಕ್ಕೆ ಅವಕಾಶವಿಲ್ಲ. ಅರ್ಥಾನುಸಂಧಾನ ಪಾರಾಯಣದ ಪರಗುರಿಯನ್ನು ತಲುಪಲು ಅತ್ಯವಶ್ಯಕ. ದಾಸವರೇಣ್ಯರು ಶಾಸ್ತ್ರ ಪ್ರಮೇಯಗಳನ್ನು ಇಡೀಡಿಯಾಗಿ ತಮ್ಮ ಕೃತಿಗಳಲ್ಲಿ ಭಟ್ಟಿ ಇಳಿಸಿದ್ದಾರೆ. ಕನ್ನಡ ಕೃತಿಗಳು ನಮಗೆ ಹತ್ತಿರವು ಮಾತೃಭಾಷೆಯಾಗಿರುವುದರಿಂದ ಅರ್ಥಾನುಸಂಧಾನಕ್ಕೆ ಸುಲಭವಾಗಿವೆ. ಮಗು ತನ್ನ ತೊದಲು ನುಡಿಗಳಿಂದ ನುಡಿದರೆ ತಾಯಿ ಕಂಡು ಆನಂದಪಡುವಂತೆ ಪರಮಾತ್ಮನು ದಾಸರ ನುಡಿಗಳಿಗೆ ಸಮೀಪಿಯಾಗುತ್ತಾನೆ. “ಕಲುಷವಚನಗಳಾದರಿವು ಬಾಂಬೊಳೆಯ ಪೆತ್ತನ ಪಾದಮಹಿಮಾ ಜಲಧಿ ಪೊಕ್ಕದರಿಂದ ಮಾಣ್ದಪರೇ ಮಹೀಸುರರು”, “ಸಿರಿ ನಿಲಯನ ಗುಣಗಳ ತಿಳಿದು ಭಜಿಸುವುದು, ಫಲವಿದು ಬಾಳ್ದುದಕೆ” ಇತ್ಯಾದಿ ದಾಸನುಡಿಗಳೇ ಸಾಕ್ಷೀ.

ನಿಮ್ಮ ಸಲಹೆ ಸೂಚನೆ, ಟೀಕೆಗಳಿಗೆ ಸದಾ ಸ್ವಾಗತ. ನಿಮ್ಮ ಅನಿಸಿಕೆಗಳನ್ನು ಈ ಪುಟದಲ್ಲಿ ತಿಳುಹಿಸಿ.

ಧನ್ಯವಾದಗಳು.

Advertisements

6 thoughts on “ಕುರಿತು

  1. ನಮಸ್ಕಾರ.ಈಗ ತಾನೆ ನಿಮ್ಮ ಈ ಬ್ಲಾಗ್ ಕಂಡೆ. ತುಂಬ ಚೆನ್ನಾಗಿದೆ. ಇಂಥ ಮಾಹಿತಿಗಳು ಅಂತರ್ ಜಾಲದಲ್ಲಿ ದೊರೆಯುವುದು ಅಪರೂಪ. ನಾನು ಇಂದು ಪುಟ್ಟ ಬರಹ ಹಾಕಿದ್ದೇನೆ. ದಯಮಾಡಿ ನೋಡಿ. ಆದರೆ ನನಗೆ ಬರೆಯಿರಿ. ಶಾಮ್.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s