ವೈಷ್ಣವ ಸ್ತೋತ್ರ ಸಂಗ್ರಹ

ವಾಚಕ ವೃಂದಕ್ಕೆ ಹಾರ್ದಿಕ ಅಭಿನಂದನೆಗಳು. ಸ್ತುತಿ, ಸ್ತೋತ್ರಸಾಹಿತ್ಯ ಮತ್ತು ಹರಿದಾಸರ ಕೃತಿಗಳು ನಾವು ನಿತ್ಯ ಪಠಿಸುವ ಭಕ್ತಿರತ್ನಗಳಾಗಿವೆ. ಈ ಸಮೃದ್ಧ ವೈಷ್ಣವ ಭಕ್ತಿ ಸಾಹಿತ್ಯವನ್ನು ಪರಿಚಯಿಸುವಲ್ಲಿ “ವೈಷ್ಣವ ಸ್ತೋತ್ರ ಸಂಗ್ರಹ” ಒಂದು ಚಿಕ್ಕ ಪ್ರಯತ್ನ. ಅನೇಕ ಚಿಕ್ಕ, ದೊಡ್ಡ ಕೃತಿಗಳನ್ನು ಹಂತ ಹಂತವಾಗಿ ಕೊಡಲಾಗುವುದು. ಮುಂಬರುವ ದಿನಗಳಲ್ಲಿ ಕೆಲವು ಕೃತಿಗಳನ್ನು ಅನುವಾದ ಸಹಿತ ಕೊಡುವ ಇಚ್ಛೆಯಿದೆ. ಭಾವಿಕರು ಜಗತ್ತಿನ ಯಾವುದೆ ಭಾಗದಲ್ಲಿ ಇದ್ದರೂ, ಈ ಸ್ತೋತ್ರ ಸಂಗ್ರಹವು ಅವರನ್ನು ತನ್ನ ಸಂಪ್ರದಾಯ, ಪರಂಪರೆಗೆ ಹತ್ತಿರವಾಗಿಸುವಲ್ಲಿ ಸಹಾಯಕವಾಗಿದೆ. ಈ ಪ್ರಯತ್ನದ ಸದುಪಯೋಗವು ಸಜ್ಜನರಿಗೆ ಆಗಬೇಕೆಂಬುದೆ ನನ್ನ ಹಾರ್ದಿಕ ಆಶಯ.

ವಾಚಕವೃಂದ ಸಲಹೆ, ಸೂಚನೆಗಳನ್ನು ಕೊಟ್ಟು ಪ್ರೋತ್ಸಾಹಿಸಬೇಕು. ನಿಮ್ಮ ಪ್ರೋತ್ಸಾಹ ನನ್ನ ಎಕೈಕ ಅಪೇಕ್ಷೆ. ಯಾವುದೇ ದೋಷಗಳು, ತಪ್ಪುಗಳು, ಪಾಠಾಂತರಗಳು ಗಮನಕ್ಕೆ ಬಂದಲ್ಲಿ ತಪ್ಪದೇ ಸೂಚಿಸಬೇಕು. ಆಚರಣೆಯಲ್ಲಿ ಶುದ್ಧತೆ ಮತ್ತು ಬದ್ಧತೆ ಅತ್ಯಂತ ಅತ್ಯವಶ್ಯಕ.

ದೇವತಾ ಸ್ತೋತ್ರಗಳು

ಹರಿದಾಸ ವಾಙ್ಮಯ

ನಿತ್ಯ ಪಾರಾಯಣ

ಸುಳಾದಿಗಳು

ಶ್ರೀಮಹಾಲಕ್ಷ್ಮೀ ಸ್ತೋತ್ರಗಳು

ಶ್ರೀಮುಖ್ಯಪ್ರಾಣ ಸ್ತೋತ್ರಗಳು

ಶ್ರೀಗುರುಸ್ತೋತ್ರಗಳು

Advertisements

ಇತ್ತೀಚಿನ ಲೇಖನಗಳು

ಮನವ ಶೋಧಿಸಬೇಕೋ (ಶ್ರೀ ಪುರಂದರದಾಸರು)

ಮನವ ಶೋಧಿಸಬೇಕೋ ನಿಚ್ಚ
ದಿನದಿನವು ಮಾಡುವ ಪಾಪಪುಣ್ಯದ ವೆಚ್ಚ || ಪ ||

ಧರ್ಮ-ಅಧರ್ಮ ವಿಂಗಡಿಸಿ ನೀ
ಅಧರ್ಮದ ನರಗಳ ಬೇರೆ ಕತ್ತರಿಸಿ
ನಿರ್ಮಲಾಚಾರವ ಚರಿಸಿ ಪರ
ಬ್ರಹ್ಮ ಮೂರುತಿ ಪಾದಕಮಲವ ಭಜಿಸಿ || ೧ ||

ತನುವ ಖಂಡಿಸಿ ಒಮ್ಮೆ ಮಾಣೋ ನಿನ್ನ
ಮನವ ದಂಡಿಸಿ ಪರಮಾತ್ಮನ್ನ ಕಾಣೋ
ಕೊನೆಗೆ ನಿನ್ನೊಳು ನೀನೇ ಜಾಣೋ ಮುಕ್ತಿ
ನಿನಗೆ ದೂರಿಲ್ಲವೋ ಅದೇ ಒಂದು ಗೇಣೋ || ೨ ||

ಆತನ್ನ ನಂಬಿ ಕೇಡಿಲ್ಲ ಅವ
ಪಾತಕ ಪತಿತ ಸಂಗವ ಮಾಳ್ವನಲ್ಲ
ನೀತಿವಂತರೆ ಕೇಳಿರೆಲ್ಲ ನಮ-
ಗಾತನೆ ಗತಿಯೀವ ಪುರಂದರ ವಿಠಲ || ೩ ||

  1. ತೊರೆದು ಜೀವಿಸಬಹುದೆ (ಶ್ರೀ ಕನಕದಾಸರು) 1 Reply
  2. ಶ್ರೀ ತುಲಸೀಮಾಹಾತ್ಮ್ಯಮ್ Leave a reply
  3. ರಾಯಬಾರೊ ತಂದೆತಾಯಿ ಬಾರೊ (ಶ್ರೀ ಜಗನ್ನಾಥ ದಾಸರು) Leave a reply
  4. ಅಪಮೃತ್ಯು ಪರಿಹರಿಸೋ ಅನಿಲದೇವ (ಶ್ರೀ ಜಗನ್ನಾಥ ದಾಸರು) Leave a reply
  5. ಹ್ಯಾಂಗೆ ಬರೆದಿತ್ತೊ ಪ್ರಾಚೀನದಲ್ಲಿ (ಶ್ರೀ ಪುರಂದರದಾಸರು) Leave a reply
  6. ಶ್ರೀ ಮಂಗಲಾಷ್ಟಕಮ್ Leave a reply
  7. ಎದುರಾರೋ ಗುರುವೆ ಸಮನಾರೊ (ಶ್ರೀ ವ್ಯಾಸರಾಯರು) Leave a reply