ಕನ್ನಡ ನಾರಾಯಣ ವರ್ಮ (ಶ್ರೀ ವಾದಿರಾಜಯತಿ ವಿರಚಿತ)

ಸಕಲ ಋಷಿಗಳಲ್ಲಿ ಹರಿ ನಮ್ಮ ಸ್ವಾಮಿಯಾಗಿ ರಕ್ಷಿಸು |
ಜಲದಲ್ಲಿ ಮಚ್ಛಾವತಾರನಾಗಿ |
ಸ್ಥಳದಲ್ಲಿ ವಾಮನನಾಗಿ ರಕ್ಷಿಸು ನಿಮ್ಮ ನೆನೆವರಾ |
ಆಕಾಶದಲ್ಲಿ ತ್ರಿವಿಕ್ರಮನಾಗಿ ರಕ್ಷಿಸು ||
ಭಯಗಳಲ್ಲಿ ನಾರಸಿಂಹನಾಗಿ |
ಮಾರ್ಗದಲ್ಲಿ ವರಾಹನಾಗಿ ರಕ್ಷಿಸು ನಿಮ್ಮ ನೆನೆವರಾ |
ಪರ್ವತಾಗ್ರದಲ್ಲಿ ಪರಶುರಾಮನಾಗಿ ರಕ್ಷಿಸು ನಿಮ್ಮ ನೆನೆವರಾ |
ಆಶ್ರಯದಲ್ಲಿ ನರನಾರಾಯಣರಾಗಿ ರಕ್ಷಿಸು |
ಅಯೋಗ್ಯರಲ್ಲಿ ದತ್ತಾತ್ರೇಯನಾಗಿ ರಕ್ಷಿಸು |
ಕರ್ಮಬಂಧಗಳೆಲ್ಲ ಕಳೆದು ರಕ್ಷಿಸು ಕಪಿಲಮೂರ್ತಿಯಾಗಿ |
ಪ್ರಾತಃಕಾಲದಲ್ಲಿ ಕೇಶವ ನಮ್ಮ ರಕ್ಷಿಸು |
ಸಾಯಂಕಾಲದಲ್ಲಿ ಗೋವಿಂದ ನಮ್ಮ ರಕ್ಷಿಸು |
ಅಪರಾಹ್ಣಕಾಲಗಳೆಲ್ಲ ಕಳೆದು ರಕ್ಷಿಸು |
ನಮ್ಮ ಸಕಲ ಕಾಲಗಳಲಿ ನರಕದಿಂದ ಕೂರ್ಮನಾಗಿ ರಕ್ಷಿಸು |
ವಿಪತ್ತಿನಿಂದ ಧನ್ವಂತರಿ ರಕ್ಷಿಸು |
ಅನ್ಯದೇವತೆ ಭಜನೆ ಕಳೆದು ರಕ್ಷಿಸಯ್ಯ ಶ್ರೀಕೃಷ್ಣಮೂರುತಿಯಾಗಿ |
ಅಜ್ಞಾನ ವಿಷಯಗಳ ಕಳೆದು ರಕ್ಷಿಸು ವೇದವ್ಯಾಸ ಮೂರುತಿಯಾಗಿ |
ಕೃಷ್ಣನ ಶಂಖವೆ ನಿಮ್ಮ ಧನಿದುರಿ ರಾಕ್ಷಸರ ಎದೆ ಒಡೆಸಿ,
ಭಯ ಬಿಡಿಸಿ ಲಯವನೆ ಮಾಡಿಸಿ ಪೂತನಿಗಂಧರ್ವರು |
ಕೂಷ್ಮಾಂಡ, ತೋರಿಸಲು ವಿಷ್ಣುಗದೆ ರಾಕ್ಷಸರ ಒಡೆದು ಚೂರ್ಣವ ಮಾಡಿ |
ಕಿಡಿಗಳಂತೆ ಭೂಮಿ ಮೇಲೆ ಆಧರಿಸಿ |
ಶತಚಂದ್ರ ಪ್ರಭೆಯಂತೆ ಹೊಳೆವ ಹರಿಯು |
ನಮ್ಮ ಮತಿವಂತರು ವೈರಿಕಣ್ಣಿಗೆ ಕಾಣಬಾರದು ಮಾಡಿ |
ತೋರಿಸಿ ತಮ್ಮ ದಿವ್ಯತೇಜಗಳು |
ಧರ್ಮ ವಿಷಯದಲಿ ಹಯಗ್ರೀವನಾಗಿ ರಕ್ಷಿಸು |
ತ್ರಿಸಂಧ್ಯಾಕಾಲದಲಿ ದಾಮೋದರನಾಗಿ ವಿಶ್ವಮೂರ್ತಿಯಾಗಿ ರಕ್ಷಿಸು |
ಅರ್ಧರಾತ್ರಿಯಲಿ ಹೃಷೀಕೇಶನಾಗಿ |
ಅಪರಾತ್ರಿಯಲಿ ರಕ್ಷಿಸಯ್ಯ ಶ್ರೀವತ್ಸಮೂರ್ತಿಯಾಗಿ |
ಸಾಮವೇದಕೆ ಅಭಿಮಾನಿಯಾಗಿ ಗರುಡವಾಹನನೆ |
ಸಲಹೆನ್ನ ವಿಷದ ಭಯಗಳ ಬಿಡಿಸಿ |
ಕೃಷ್ಣಮುಕುಟಧರನೆ ರಕ್ಷಿಸೋ ನಮ್ಮನ್ನ ಪ್ರಾಣೇಂದ್ರಿಯದಿಂದ |
ಬುದ್ಧಿಯಿಂದ ದಿಕ್ಕು ದಿಕ್ಕುಗಳಲಿ ನಾರಸಿಂಹಮೂರ್ತಿಯಾಗಿ |
ನಾರಸಿಂಹ ನಾದದಲಿಂದ ಎಲ್ಲ ಪರಿಯಿಂದ ಭಕ್ತರನ್ನೆಲ್ಲ ನರಹರಿ ಇದ್ದು ರಕ್ಷಿಸೋ |
ಗುರುಮಧ್ವರಾಯರ ಗುರುವಿಶ್ವವ್ಯಾಪಕರ ಸುವಿಷ್ಣುವೈಷ್ಣವರ ಮಗನಂತೆ
ನಿಮ್ಮ ಸುನಾಮ ಎಂದು ಪಾಡಿ ಸುಖಿಯಾಗಿ ಜಮದಗ್ನಿ ವತ್ಸ
ಪ್ರಹ್ಲಾದವರದ, ಅಸುರರಗೆಲಿದ ಬಲರಾಮ ಜಾನಕಿವಲ್ಲಭ ಜಯ ಜಯ ರಾಮ
ನಿತ್ಯ ವೈಕುಂಠ ನಿಜ ಗೋವಿಂದ, ಅಂಬರೀಷರಾಯಗೆ ವರಗಳ ಕೊಟ್ಟ
ನಂಬಿದ ಭಕ್ತರಿಗೆ ಅಭಯ ಕೊಟ್ಟ ಯಶೋದೆಯ ಮನ ಉದ್ದರಿಸಿ ಹಯವದನ ರಕ್ಷಿಸು |

|| ಷಷ್ಠಸ್ಕಂಧ ಅಷ್ಟಮಾಧ್ಯಾಯದಲಿ ಇಂದ್ರನಿಗೆ ಉಪದೇಶಿಸಿದ ನಾರಾಯಣವರ್ಮವು ಸಂಪೂರ್ಣ ||

Advertisements

2 thoughts on “ಕನ್ನಡ ನಾರಾಯಣ ವರ್ಮ (ಶ್ರೀ ವಾದಿರಾಜಯತಿ ವಿರಚಿತ)

    • Thanks for the comments.
      I have prepared first 4 sargas of Manimanjari, and will be posting them soon. The subject matter of Manimanjari is controversial so publishing meaning on the web will be difficult. But you can get books with meaning and explanations in the market. If you need any further information please contact me.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s