ಕೇಶವಾದಿ ನಾಮಗಳು (ಶ್ರೀ ಕನಕದಾಸರು)

ಕೇಶವಾದಿ ನಾಮಗಳು

ಕೇಶವಾದಿ ನಾಮಗಳು

ಈಶ ನಿನ್ನ ಚರಣ ಭಜನೆ |
ಆಸೆಯಿಂದ ಮಾಡುವೆನು |
ದೋಷರಾಶಿ ನಾಶಮಾಡು ಶ್ರೀಶಕೇಶವ || ಪ ||

ಶರಣು ಹೊಕ್ಕೆನಯ್ಯು ಎನ್ನ |
ಮರಣಸಮಯದಲ್ಲಿ ನಿನ್ನ |
ಚರಣಸ್ಮರಣೆ ಕರುಣಿಸಯ್ಯ ನಾರಾಯಣಾ || ೧ ||

ಶೋಧಿಸೆನ್ನ ಭವದ ಕಲುಷ |
ಬೋಧಿಸಯ್ಯ ಜ್ಞಾನವೆನಗೆ |
ಬಾಧಿಸುವ ಯಮನ ಬಾಧೆ ಬಿಡಿಸೋ ತಂದೆ ಮಾಧವಾ || ೨ ||

ಹಿಂದನೇಕ ಯೋನಿಗಳಲಿ |
ಬಂದು ಬಂದು ನೊಂದೆ ನಾನು |
ಇಂದು ಭವದ ಬಂಧ ಬಿಡಿಸೋ ತಂದೆ ಗೋವಿಂದಾ || ೩ ||

ಭ್ರಷ್ಟನೆನಿಸಬೇಡ ಕೃಷ್ಣ |
ಇಷ್ಟು ಮಾತ್ರ ಬೇಡಿಕೊಂಬೆ |
ಶಿಷ್ಟರೊಡನೆ ಇಟ್ಟು ಕಷ್ಟ ಬಿಡಿಸೋ ವಿಷ್ಣುವೆ || ೪ ||

ಮದನನಯ್ಯ ನಿನ್ನ ಮಹಿಮೆ |
ವದನದಲ್ಲಿ ನುಡಿಯುವಂತೆ |
ಹೃದಯದಲ್ಲಿ ಹುದುಗಿಸಯ್ಯ ಮಧುಸೂದನ || ೫ ||

ಕವಿದುಕೊಂಡು ಇರುವ ಪಾಪ |
ಸವೆದು ಪೋಗುವಂತೆ ಮಾಡಿ |
ಜವನ ಬಾಧೆಯನ್ನು ಬಿಡಿಸೋ ಶ್ರೀತ್ರಿವಿಕ್ರಮ || ೬ ||

ಓದನ್ನು ಮುಂದುವರೆಸಿ

Advertisements