ತರುಣ ತುಲಸಿಮಾಲಾ ತಪ್ತಗಾಂಗೇಯ ಚೇಲಾ
ಶರಧಿ ತನಯಲೋಲಾ ಶಕ್ವರೀಕಾರಿ ಫಾಲ
ಶಿರಿ ಅಜಭವ ಮೂಲಾ ಶುದ್ಧ ಕಾರುಣ್ಯ ಲೀಲಾ
ಪುರಹರ ಸುಖ ಲೀಲಾ ಪಾಹಿ ಗೋಪಾಲ ಬಾಲಾ ||
ಪತಿತ ಪಾವನ ಪಾದ ಶತಕೋಟಿ ರವಿತೇಜ
ಟೊಂಕದ ಮೇಲೆ ಕೈಯಿಟ್ಟು ಇಟ್ಟಿಗೆ ಮೇಲೆ ನಿಂತಾ
ಸತ್ಯ ಸಂಕಲ್ಪ ನೀ ನಿತ್ಯ ತೃಪ್ತನು ನಿನ್ನ
ಭಕ್ತ ವಾತ್ಸಲ್ಯಕ್ಕೆ ಮಿತಿಯಿಲ್ಲವಯ್ಯಾ ||
Advertisements
hare vittal. panduranga dayanidhi