ಹರಿ ದಿನದಲಿ ಉಂಡ ನರರಿಗೆ (ಶ್ರೀ ಪುರಂದರದಾಸರು)

ರಾಗ: ಶಂಕರಾಭರಣ                        ತಾಳ: ಆಟ

ಹರಿ ದಿನದಲಿ ಉಂಡ ನರರಿಗೆ ಘೋರ
ನರಕ ತಪ್ಪದು ಎಂದು ಶ್ರುತಿಯು ಸಾರುತಲಿದೆ || ಪ ||

ಗೋವ ಕೊಂದ ಪಾಪ ಸಾವಿರ ವಿಪ್ರರ
ಜೀವಹತ್ಯವ ಮಾಡಿದ ಪಾಪವು
ಭಾವಜನಯ್ಯನ ದಿನದಲುಂಡವರಿಗೆ
ಕೀವಿನೊಳಗೆ ಹಾಕಿ ಕುದಿಸುವ ಯಮನು || ೧ ||

ಒಂದೊಂದು ಅಗಳಿಗೆ ಕೋಟಿ ಕೋಟಿ ಕ್ರಿಮಿ
ಅಂದಿನ ಅನ್ನವು ನಾಯ್‍ಮಾಂಸವು
ಮಂದರಧರನ ದಿನದಲುಂಡವರನು
ಹಂದಿಯ ಸುಡುವಂತೆ ಸುಡಿಸುವ ಯಮನು || ೨ ||

ಅನ್ನ ಉದಕ ತಾಂಬೂಲ ದರ್ಪಣಗಳು
ಚಿನ್ನ ವಸ್ತ್ರಗಳೆಲ್ಲ ವರ್ಜಿತವು
ತನ್ನ ಸತಿಯ ಸಂಗ ಮಾಡುವ ಮನುಜನ
ಬೆನ್ನಲಿ ಕರುಳ ತೆಗೆಸುವ ಯಮನು || ೩ ||

ಜಾವದ ಜಾಗರ ಕ್ರತು ನಾಲ್ಕು ಸಾವಿರ
ಜಾವನಾಲ್ಕರ ಫಲಕೆ ಮಿತಿಯಿಲ್ಲವು
ದೇವದೇವನ ದಿನದಿ ನಿದ್ರೆಯಗೈದರೆ ಹುರಿ-
ಗಾವಲಿನೊಳು ಹಾಕಿ ಹುರಿಸುವ ಯಮನು || ೪ ||

ಇಂತು ಏಕಾದಶೀ ಉಪವಾಸ ಜಾಗರ
ಸಂತತ ಕ್ಷೀರಾಬ್ಧಿಶಯನನ ಪೂಜೆ
ಸಂತೋಷದಿಂದಲಿ ಮಾಡಿದ ಜನರಿಗ-
ನಂತಫಲವನೀವ ಪುರಂದರವಿಠಲ || ೫ ||

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s