ಘಟಿಕಾಚಲದಿ ನಿಂತಾ ಹನುಮಂತಾ (ಶ್ರೀ ಪುರಂದರದಾಸರು)

ರಾಗ: ನಾಟ            ತಾಳ: ಆಟ

ಘಟಿಕಾಚಲದಿ ನಿಂತಾ ಹನುಮಂತಾ
ಘಟಿಕಾಚಲದಿ ನಿಂತಾ || ಪ ||

ಘಟಿಕಾಚಲದಿ ನಿಂತ ಪಟು ಹನುಮಂತನು
ಪಠನೆಯ ಮಾಡಲುತ್ಕಟದಿ ಪೊರೆವೆನೆಂದು || ಅ.ಪ ||

ಚತುರಯುಗದಿ ತಾ ಅತಿಬಲವಂತನು ಚತುರ್ಮುಖನಯ್ಯನ
ಚತುರ ಮೂರ್ತಿಗಳ ಚತುರತನದಿ ಭಜಿಸಿ
ಚತುರ್ಮುಖನಾಗಿ ಚತುರ್ವಿಧ ಫಲಕೊಡುತ || ೧ ||

ಸರಸಿಜಭವಗೋಸ್ಕರ ಕಲ್ಮಷದೂರ ವರಚಕ್ರ ತೀರ್ಥಸರ
ಮೆರೆವಾಚಲದಿ ನಿತ್ಯನರಹರಿಗೆದುರಾಗಿ
ಸ್ಥಿರಯೋಗಾಸನದಿ ವರವಕೊಡುವೆನೆಂದು || ೨ ||

ಶಂಖಚಕ್ರವಧರಿಸಿ ಭಕ್ತರ ಮನ ಪಂಕವ ಪರಿಹರಿಸಿ
ಪಂಕಜನಾಭ ಶ್ರೀಪುರಂದರವಿಠಲ
ಬಿಂಕದ ಸೇವಕ ಸಂಕಟಕಳೆಯುತ || ೩ ||

ನಿಮ್ಮ ಟಿಪ್ಪಣಿ ಬರೆಯಿರಿ