ಬಾರೋ ಮನೆಗೆ ಗೋವಿಂದ (ಶ್ರೀಪಾದರಾಜರು)

ರಾಗ: ಮಧ್ಯಮಾವತಿ        ತಾಳ: ಆಟ

ಬಾರೋ ಮನೆಗೆ ಗೋವಿಂದ-ನಿನ್ನಂಘ್ರಿ ಕಮಲವ
ತೋರೋ ಎನೆಗೆ ಮುಕುಂದ-ನಲಿದಾಡು ಮನದಲಿ
ಮಾರಪಿತ ಆನಂದ-ನಂದನ್ನ ಕಂದ || ಪ ||

ಚಾರುತರ ಶರೀರ ಕರುಣಾ
ವಾರಿನಿಧಿ ಭವಘೋರನಾಶನ
ವಾರಿಜಾಸನವಂದ್ಯ ನೀರಜ
ಸಾರಸದ್ಗುಣ ಹೇ ರಮಾಪತಿ || ಅ.ಪ ||

ನೋಡು ದಯದಿಂದೆನ್ನ-ಕರಪದುಮ ಶಿರದಲಿ
ನೀಡು ಭಕ್ತಪ್ರಸನ್ನ-ನಲಿದಾಡು ಮನದಲಿ
ಬೇಡಿಕೊಂಬೆನೊ ನಿನ್ನ-ಆನಂದಘನ್ನ
ಮಾಡದಿರು ಅನುಮಾನವನು ಕೊಂ
ಡಾಡುವೆನು ತವ ಮಹಿಮೆಗಳನು
ಜೋಡಿಸುವೆನು ಕರಗಳನು ಚರಣಕೆ
ಕೊಡಿಸೋ ತವ ದಾಸಜನರೊಳು || ೧ ||

ಹೇಸಿ ವಿಷಯಗಳಲ್ಲೀ-ತೊಳಲಾಡಿ ನಾ ಬಲು
ಕ್ಲೇಶ ಪಡುವುದ ಬಲ್ಲೀ-ಧನಯುವತಿಗಳ ಸುಖ
ಲೇಸು ಎಂಬುದನು ಕೊಲ್ಲಿ-ಆಸೆ ಬಿಡಿಸಿಲ್ಲಿ
ಏಸುಜನುಮದ ದೋಷದಿಂದಲಿ
ಈಸುವೆನು ಇದರೊಳಗೆ ಇಂದಿಗೆ
ಮೋಸವಾಯಿತು ಆದುದಾಗಲಿ
ಶ್ರೀಶ ನೀ ಕೈ ಪಿಡಿದು ರಕ್ಷಿಸೋ || ೨ ||

ನೀನೆ ಗತಿ ಎನಗಿಂದು-ಉದ್ಧರಿಸೋ ಬೇಗನೆ
ದೀನಜನರಿಗೆ ಬಂಧು-ನಾ ನಿನ್ನ ಸೇವಕ
ಶ್ರೀನಿವಾಸನೆ ಹೃದಯಾಬ್ಜಮಂಟಪ
ಸ್ಥಾನದೊಳಗಭಿವ್ಯಾಪ್ತ ಚಿನ್ಮಯ
ಧ್ಯಾನಗೋಚರನಾಗಿ ಕಣ್ಣಿಗೆ
ಕಾಣಿಸುತ ಶ್ರೀರಂಗವಿಠ್ಠಲ || ೩ ||

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s