ಚಿಂತ್ಯಾಕ ಮಾಡಿತಿದ್ದಿ ಚಿನ್ಮಯನಿದ್ದಾನೆ (ಶ್ರೀ ಪುರಂದರದಾಸರು)

ರಾಗ: ಮಿಶ್ರಪೀಲು          ತಾಳ: ತ್ರಿತಾಲ್

ಚಿಂತ್ಯಾಕ ಮಾಡಿತಿದ್ದಿ ಚಿನ್ಮಯನಿದ್ದಾನೆ || ಪ ||
ಚಿಂತಾರತ್ನವೆಂಬೋ ಅನಂತನಿದ್ದಾನೆ ಪ್ರಾಣಿ || ಅ.ಪ ||

ಎಳ್ಳು ಮೊನೆಯ ಮುಳ್ಳುಕೊನೆಯ ಪೊಳ್ಳು ಬಿಡದೆ ಒಳಗೆ ಹೊರಗೆ
ಎಲ್ಲ ಠಾವಿನಲ್ಲಿ ಲಕುಮಿ ನಲ್ಲನಿದ್ದಾನೆ ಪ್ರಾಣಿ || ೧ ||

ಗೋಪ್ತಾ ತ್ರಿಜಗದ್ವ್ಯಾಪ್ತಾ ಭಜಕರ ಆಪ್ತನೆನಿಸಿ ಸ್ತಂಭದಲ್ಲಿ
ಪ್ರಾಪ್ತನಾದ ಪ್ರಹ್ಲಾದನ ಪರಮಾಪ್ತನಿದ್ದಾನೆ ಪ್ರಾಣಿ || ೨ ||

ಹಿಂದೆ ನಿನ್ನ ಸಲಹಿದರ‍್ಯಾರೋ ಮುಂದೆ ನಿನ್ನ ಕೊಲ್ಲುವರ‍್ಯಾರೋ
ಅಂದಿಗಿಂದಿಗೆಂದಿಗೂ ಗೋವಿಂದನಿದ್ದಾನೆ ಪ್ರಾಣಿ || ೩ ||

ಮುಕ್ಕಣದೇವರ್ಕಳಿಗೆ ಸಿಕ್ಕಿದ್ದ ಸೆರೆಯನ್ನು ಪರಿದು
ಚಿಕ್ಕವಂಗೆ ಅಚಲಪದವಿಯ ದಕ್ಕಿಸಿದ್ದಾನೆ ಪ್ರಾಣಿ || ೪ ||

ನಾನು ನನ್ನದು ಎಂಬುದು ಬಿಟ್ಟು ಹೀನವಿಷಯಂಗಳನ್ನು ಜರಿದು
ಜ್ಞಾನಗಮ್ಯ ಕಾಯೋ ಎನಲು ಪೂರ್ಣನಿದ್ದಾನೆ ಪ್ರಾಣಿ || ೫ ||

ಸುತ್ತಲು ಬಂದು ದುರಿತಗಳೆಲ್ಲ ಕತ್ತರಿಸಿ ಕಡಿದು ಹಾಕುವ
ಹೆತ್ತ ತಾಯಿತಂದೆ ತವರು ಹತ್ತಿರ ಇದ್ದಾನೆ ಪ್ರಾಣಿ || ೬ ||

ಬಲ್ಲಿದ ಭಜಕರ ಹೃದಯದಲ್ಲಿ ನಿಂತು ಶ್ರೀಪುರಂದರ ವಿಠಲ
ಸೊಲ್ಲು ಸೊಲ್ಲಿಗವರ ಬಯಕೆ ಸಲ್ಲಿಸುತ್ತಿದ್ದಾನೆ ಪ್ರಾಣಿ || ೭ ||

Advertisements

One thought on “ಚಿಂತ್ಯಾಕ ಮಾಡಿತಿದ್ದಿ ಚಿನ್ಮಯನಿದ್ದಾನೆ (ಶ್ರೀ ಪುರಂದರದಾಸರು)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s