ಸುಮ್ಮನೆ ಬರುವುದೆ ಮುಕ್ತಿ (ಶ್ರೀ ಪುರಂದರದಾಸರು)

ರಾಗ: ಆನಂದಭೈರವಿ      ತಾಳ: ಆಟ

ಸುಮ್ಮನೆ ಬರುವುದೆ ಮುಕ್ತಿ
ನಮ್ಮ ಅಚ್ಯುತಾನಂತನ ನೆನೆಯದೆ ಭಕ್ತಿ || ಪ ||

ಮನದಲ್ಲಿ ದೃಢವಿರಬೇಕು ಪಾಪಿ
ಜನರ ಸಂಸರ್ಗವ ನೀಗಲಿ ಬೇಕು
ಅನುಮಾನವನು ಬಿಡಬೇಕು ತನ್ನ
ತನುಮನ ಧನವನೊಪ್ಪಿಸಿ ಕೊಡಬೇಕು || ೧ ||

ಕಾಮಕ್ರೋಧವ ಬಿಡಬೇಕು ಪರ
ಕಾಮಿನಿಯರ ಹಂಬಲ ಬಿಡಬೇಕು
ಹೇಮದಾಸೆಯ ಸುಡಬೇಕು ಹರಿ
ನಾಮ ಸಂಕೀರ್ತನೆಯನು ಮಾಡಬೇಕು || ೨ ||

ಸಂದಣಿಗಳ ಬಿಡಬೇಕು ದೇಹ
ಬಂಧುಬಾಂಧವರ ಸ್ನೇಹವ ಬಿಡಬೇಕು
ನಿಂದಿಸಿದರೆ ಹಿಗ್ಗಬೇಕು ಕೋಪ
ಬಂದಾಗ ಸೈರಣೆ ಬಿಡದಿರಬೇಕು || ೩ ||

ಹರಿಯೆ ಗುರುವೆನ್ನಬೇಕು ಶ್ರೀ
ಹರಿಯೆ ಪರದೈವವೆಂತೆನ್ನಬೇಕು
ಪರವಸ್ತು ಒಲ್ಲೆನಬೇಕು ದೇಹ
ಸ್ಥಿರವಲ್ಲವೆಂತೆಂದು ತಿಳಿಯಲು ಬೇಕು || ೪ ||

ವ್ಯಾಪಾರವನು ಬಿಡಬೇಕು ನಮ್ಮ
ಶ್ರೀಪತಿ ಪುರಂದರವಿಠಲೆನ್ನಬೇಕು
ಪಾಪರಹಿತನಾಗಬೇಕು ಜ್ಞಾನ
ದೀಪದಿ ಬೆಳಕಿನಲಿ ಓಡಾಡಬೇಕು || ೫ ||

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s