ಧವಳಗಂಗೆಯ ಗಂಗಾಧರ ಮಹಾಲಿಂಗ (ಶ್ರೀ ವಾದಿರಾಜತೀರ್ಥರು)

ಧವಳಗಂಗೆಯ ಗಂಗಾಧರ ಮಹಾಲಿಂಗ

ರಾಗ: ಮಧ್ಯಮಾವತು      ತಾಳ: ಅಟ

ಧವಳಗಂಗೆಯ ಗಂಗಾಧರ ಮಹಾಲಿಂಗ ಮಾ
ಧವನ ತೋರಿಸಯ್ಯಾ ಗುರುಕುಲೋತ್ತುಂಗ || ಪ ||

ಅರ್ಚಿಸಿದವರಿಗಭೀಷ್ಟವ ಕೊಡುವ
ಹೆಚ್ಚಿನ ಅಘಗಳ ತರಿದು ಬಿಸುಟುವ
ದುಶ್ಚರಿತಗಳೆಲ್ಲ ದೂರದಲ್ಲಿಡುವ ನ
ಮ್ಮಚ್ಯುತಗಲ್ಲದ ಅಸುರರ ಬಡಿವ || ೧ ||

ಮಾರನ ಗೆದ್ದ ಮನೋಹರ ಮೂರ್ತಿ
ಸಾರ ಸಜ್ಜನರಿಗೆ ಸುರ ಚಕ್ರವರ್ತಿ
ಧಾರಿಣಿಯೊಳಗೆ ತುಂಬಿದೆ ನಿಮ್ಮ ಕೀರ್ತಿ ಮು
ರಾರಿಯ ತೋರಯ್ಯಾ ನಿಮಗೆ ಶರಣಾರ್ತಿ || ೨ ||

ಚೆನ್ನ ಪ್ರಸನ್ನ ಶ್ರೀಹಯವದನನ್ನ
ಅನುದಿನ ನೆನೆವಂತೆ ಮಾಡೋ ನೀ ಎನ್ನ
ಅನ್ಯನಲ್ಲವೋ ನಾನು ಗುರುವೆಂಬ ನಿನ್ನ
ಇನ್ನಾದರು ಹರಿಯ ತೋರೊ ಮುಕ್ಕಣ್ಣ || ೩ ||

Advertisements

One thought on “ಧವಳಗಂಗೆಯ ಗಂಗಾಧರ ಮಹಾಲಿಂಗ (ಶ್ರೀ ವಾದಿರಾಜತೀರ್ಥರು)

  1. ನಾನು ಮೋಹನ್ ಕುಮಾರ್. ಈ ವೆಬ್ ಸೈಟ್ ಅತ್ಯಂತ ಸುಂದರವಾಗಿದೆ. ಮತ್ತು ಆಧ್ಯಾತ್ಮಿಕ ಜೀವನದಲ್ಲಿ ಶ್ರದ್ಧೆ ಇರುವ ಪ್ರತಿಯೊಬ್ಬರಿಗು ತುಂಬಾ ಉಪಯಕ್ತವಾಗಿದೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s