ವೃಷಭನೇರಿದ ವಿಷಧರನ್ಯಾರೆ ಪೇಳಮ್ಮಯ್ಯ (ಶ್ರೀಪಾದರಾಜರು)

ರಾಗ: ಗುಂಡಕ್ರಿಯೆ             ತಾಳ: ಆದಿತಾಳ

ವೃಷಭನೇರಿದ ವಿಷಧರನ್ಯಾರೆ ಪೇಳಮ್ಮಯ್ಯ || ಪ ||

ಹಸುಳೆ ಪಾರ್ವತಿಯ ತಪಸಿಗೆ ಮೆಚ್ಚಿದ
ಜಟಾಕುಂಡಲಧಾರಿ ಕಾಣಮ್ಮ || ಅ.ಪ ||

ಕೈಲಾಸಗಿರಿಯ ದೊರೆಯಿವನಮ್ಮ – ಅದು ಅಲ್ಲದೆ ಕೇಳೆ
ಬೈಲು ಸ್ಮಶಾನದಿ ಮನೆಯಿವಗಮ್ಮ – ಸಂಕರ್ಷಣನೆಂದು
ಕೇಳೆ ಮಹಿಯೊಳು ಜನಪೊಗಳುವರಮ್ಮ – ಇದು ನೈಜವಮ್ಮ
ನಾಲಿಗೆ ಸಾಸಿರ ಫಣಿಭೂಷಣನಮ್ಮ
ರಮೆಯರಸಗೆ ಇವ ಮೊಮ್ಮಗನಮ್ಮ || ೧ ||

ಬಾಲೆ ದಾಕ್ಷಾಯಣಿ ಪತಿ ಇವನಮ್ಮ – ಮಾನವ ಯಾಗದಲಿ
ಬ್ಹಾಳ ಕೃತ್ಯಗಳನು ನಡೆಸಿದನಮ್ಮ – ಸಾಗರದಲಿ ಹುಟ್ಟಿದ
ಕಾಳಕೂಟವ ಭಕ್ಷಿಸಿದನಮ್ಮ – ರಾಮನ ದಯವಮ್ಮ
ಮೇಲೆ ಉಳಿಯಲು ಶೇಷಗರಳವು
ನೀಲಕಂಠನೆಂದೆನಿಸಿದನಮ್ಮ || ೨ ||

ಹರನೊಂದಿಗೆ ವೈಕುಂಠಕೆ ಬರಲು – ತಾತಗೆ ವಂದಿಸುತ
ತರಣೀ ರೂಪವ ನೋಡೇನೆನೆಲು – ಹರಿ ತಾ ನಸುನಗುತ
ಕರೆದು ಸೈರಿಸಲಾರೆ ನೀ ಎನಲು – ಹಠದಿ ಕುಳ್ಳಿರಲು
ಕರುಣಿಗಳರಸನು ಹರನ ಮೊಗದ ನೋಡಿ
ಅರುಣೋದಯಕೆ ಬಾರೆಂದು ಕಳುಹಿದ || ೩ ||

ಅರುಣೋದಯಕೆ ಗಂಗಾಧರ ಬರಲು – ಹದಿನಾರು ವರುಷದ
ತರುಣೀ ರೂಪದಿ ಹರಿ ಮನದೊಳಗಿರಲು – ಚರಣನಖಾಗ್ರದಿ
ಧರಣೀ ಬರೆಯುತ್ತ ನಿಂತಿರಲು – ಸೆರಗ ಪಿಡಿಯೆ ಬರಲು
ಕರದಿ ಶಂಖ ಗದೆ ಚಕ್ರವ ತೋರಲು
ಹರನು ನಾಚಿ ತಲೆ ತಗ್ಗಿಸಿ ನಿಂತ || ೪ ||

ಮಂಗಳಾಂಗನೆ ಮಾರಜನಕ – ನಾ ಮಾಡಿದ ತಪ್ಪ
ಹಿಂಗದೆ ಕ್ಷಮಿಸೊ ಯದುಕುಲ ತಿಲಕ – ವಕ್ಷದಲ್ಲೊಪ್ಪುವ ನಿ
ನ್ನಂಗನೆ ಅರಿಯಳೊ ನಖಮಹಿಮಾಂಕ – ಹೀಗೆನುತಲಿ ತವಕ
ರಂಗವಿಠಲನ ಪದಂಗಳ ಹಿಡಿದು ಸಾ
ಷ್ಟಾಂಗವೆರಗಿ ಕೈಲಾಸಕೆ ನಡೆದ || ೫ ||

Advertisements

4 thoughts on “ವೃಷಭನೇರಿದ ವಿಷಧರನ್ಯಾರೆ ಪೇಳಮ್ಮಯ್ಯ (ಶ್ರೀಪಾದರಾಜರು)

  • ನಿಮ್ಮ ಸೂಚನೆಗೆ ಧನ್ಯವಾದಗಳು,

   ಈ ರಚನೆಯಲ್ಲಿ ಇನ್ನೂ ಕೆಲವು ಪಾಠಭೇಧಗಳಿವೆ. ಈ ಮೇಲಿನ ಪಾಠವನ್ನು ಮೈಸೂರು ವಿಶ್ವವಿದ್ಯಾನಿಲಯದಿಂದ ಪ್ರಕಟಿತ ಮತ್ತು ಡಾ. ಟಿ.ಎಸ. ನಾಗರತ್ನ ಅವರಿಂದ ಸಂಪಾದಿತ “ದಾಸ ಸಾಹಿತ್ಯ ಸೌರಭ” (ಪುಟ ೩೫) ಕೃತಿಯಿಂದ ಆಯ್ದುಕೊಂಡಿದ್ದೇನೆ.

   ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯರಿಂದ ಸಂಪಾದಿತ “ಶ್ರೀಹರಿಭಜನಕಲ್ಪದ್ರುಮ” (ಪುಟ ೨೧) ಕೃತಿಯಲ್ಲಿ ಬೇರೊಂದು ಪಾಠ ಸಿಗುತ್ತದೆ. ಕೆಳಗೆ ಮೊದಲ ನುಡಿಯನ್ನು ಕೊಟ್ಟಿದ್ದೇನೆ.

   ಕೈಲಾಸವಾಸದ ದೊರೆಯಿವನಮ್ಮ – ಅದು ಅಲ್ಲದೆ ಕೇಳೆ
   ಬೈಲಸ್ಮಶಾನದಿ ಮನೆಯಿವಗಮ್ಮ – ಸಂಕರ್ಷಣನೆಂದು
   ಪೇಳಿ ಮಹಿಯೊಳು ಪೊಗಳುವರಮ್ಮ – ಇದು ನಿಜವಮ್ಮ
   ನಾಲಿಗೆ ಸಾಸಿರ ಫಣಿಭೂಷಣನಮ್ಮ
   ಹಲಧರನನುಜಗೆ ಮೊಮ್ಮಗನಮ್ಮ || ೧ ||

   ಇವಲ್ಲದೆ ಇನ್ನೂ ಕೆಲವು ಪಾಠಾಂತರಗಳು ಇವೆ. ನಿಶ್ಚಿತವಾಗಿ ಹೇಳುವುದು ಕಷ್ಟ. ಗೋಪಿಕೆಯರಿಬ್ಬರು ಆಡಿಕೊಂಡ ಶಿವನ ಸ್ತುತಿಯು ಇದಾಗಿದೆ.

 1. Could you kindly get for me “VRITTA RATNA SANGRAHA” (sanskrit) composed by Sri Raghunatha Acharya (the disciple of Sri Vadirajaru) – the Biography of Sri Vadirajaru on your site? I stay in Hyderabad where I do not get any work of rare value. I shall be highly thankful to you if you can send to my email (puranik.krishnamurthy@gmail,com)

  Krishnamurthy Puranik

  • I am not a book seller. This site/blog is just my humble seva. You can inquire in Bangalore, there are many book sellers. You can also inquire in Udupi as paryaya of Sode Muth is going on. I will also make some inquiries and will get back to you asap. I am planning to write short biographies of Madhva Vaishnava Saints and Haridasa’s, the work is under progress. You can expect a lot of new material this year.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s