ಎಂದು ಕಾಂಬೆನು ಪಾಂಡುರಂಗ ಮೂರುತಿಯಾ (ಶ್ರೀ ಜಗನ್ನಾಥದಾಸರು)

ಎಂದು ಕಾಂಬೆನು ಪಾಂಡುರಂಗ ಮೂರುತಿಯಾ
ಇಂದುಭಾಗನಿವಾಸ ನರನ ಸಾರಥಿಯ || ಪ ||

ಅರುಣಾಬ್ಜೋಪಮ ಚಾರು ಚರಣಾಂಗುಲಿ ನಖರ
ತರುಣೇಂದುಚ್ಛವಿ ತಿರಸ್ಕರಿಸುವ ಪ್ರಖರ
ಕಿರುಗೆಜ್ಜೆ ಕಡಗ ನೂಪುರ ಪೆಂಡೆ ಶಫರ
ತೆರೆಜಾನು ಜಂಘೆ ಭಾಸುರ ರತ್ನ ಮುಕುರ || ೧ ||

ರಂಭಾ ಪೋಲುವ ಊರು ಪೊಂಬಣ್ಣಾಂಬರವ
ಕುಂಭೀಮಸ್ತಕದೊಲ್ ನಿತಂಬದಿ ಪೊಳೆವ
ಕಂಬುಮೇಖಳಕಂಜ ಗಂಭೀರ ನಾಭೀ
ಅಂಬುಧಿಶಾಯಿ ವಿಧಿ ಶಂಭು ಪೂಜಿತನ || ೨ ||

ಲವಕುಕ್ಷಿತ್ರಿವಳಿ ಭಾರ್ಗವಿವಕ್ಷ ಉದಯ
ರವಿ ಪೋಲುವ ಕೌಸ್ತುಭ ವೈಜಯಂತಿಯ
ಸುವಿಶಾಲ ವಕ್ಷದೊಳ್ ವಿವಿಧ ಹಾರಗಳು
ನವನೀತ ಚೋರ ಶ್ರೀಪವಮಾನಾರ್ಚಿತನ || ೩ ||

ಪದಕ ಸರಿಗೆಯ ಜಾಂಬೂನದ ಕಂಬುಕಂಠ
ರದನೀಕರ ಬಾಹು ಚೆದುರ ಭುಜಕೀರ್ತಿ
ಬದರಸಂಕಾಶಾ ಅಂಗದ ರತ್ನ ಕಟಕಾ
ಪದುಮಾರುಣ ಕರಯುಗ್ಮ ಕಟಿಯಲ್ಲಿಟ್ಟವನಾ || ೪ ||

ವಿಧುಬಿಂಬೋಪಮ ಚೆಲ್ವವದನ ಕೆಂದುಟಿಯಾ
ಬಿಧುರಾಭಾದಶನಾಲಿಂಗದನೊಳ್ ಕಿರುನಗೆಯಾ
ಕದಪು ಕನ್ನಡಿ ನಾಸಾ ತುದಿ ಚಂಪಕಮೊನೆಯಾ
ಉದಕೇಜಾಯತ ನೇತ್ರಯದುವಂಶೋದ್ಭವನಾ || ೫ ||

ಜ್ವಲಿತಕುಂಡಲ ಕರ್ಣ ಸುಲಲಿತ ಭ್ರೂಯುಗಳ
ಪೊಳೆವ ಬಾಲ ಶಶಾಂಕ ತಿಲಕಾಂಕಿತ ಫಾಲ
ಅಳಿಜಾಲವೆನಿಪ ಕುಂತಳ ರತ್ನ ಚಕಿತ
ಕಲಧೌತಮಕುಟ ದಿಗ್ವಲಯ ಬೆಳಗುವನ || ೬ ||

ಶಠಕೂರ್ಮರೂಪಿಯ ಕಿಟ ಮಾನವ ಹರಿಯಾ
ವಟುಭಾರ್ಗವ ಕಾಕುಸ್ಥ ಶಠ ಕಂಸದ್ವೇಷಿಯ
ನಿಟಿಲಾಂಬಕ ಸಹಾಯ ಖಳಕಟಕಾರಿ ಭೀಮಾ
ತಟವಾಸಿ ಜಗನ್ನಾಥವಿಠಲ ಮೂರುತಿಯ || ೭ ||

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s