ಕರ್ತಾ ಕೃಷ್ಣಯ್ಯ ನೀ ಬಾರಯ್ಯ (ಶ್ರೀ ಪ್ರಸನ್ನವೆಂಕಟ ದಾಸರು)

ರಾಗ: ಮಧ್ಯಮಾವತಿ               ತಾಳ: ಏಕ

ಕರ್ತಾ ಕೃಷ್ಣಯ್ಯ ನೀ ಬಾರಯ್ಯ | ಎ-
ನ್ನಾರ್ತಧ್ವನಿಗೊಲಿದು ನೀ ಬಾರಯ್ಯ || ಪ ||

ಸುಗುಣದ ಖಣಿಯೇ ನೀ ಬಾರಯ್ಯ ಎ-
ಮ್ಮಘವನೋಡಿಸಲು ನೀ ಬಾರಯ್ಯ
ಧಗೆಯೇರಿತು ತಾಪ ನೀ ಬಾರಯ್ಯ ಸದಾ
ಮುಗುಳ್ನಗೆಯ ಮಳೆಗರೆಯ ನೀ ಬಾರಯ್ಯ || ೧ ||

ವೈರಿವರ್ಗದಿ ನೊಂದೆ ನೀ ಬಾರಯ್ಯ | ಮ
ತ್ತ್ಯಾರು ಗೆಳೆಯರಿಲ್ಲ ನೀ ಬಾರಯ್ಯ
ಸೇರಿದೆ ನಿನ್ನಯ ಕರುಣೆಗೆ ಬಾರಯ್ಯ ಒಳ್ಳೇ
ದಾರಿಯ ತೋರಲು ನೀ ಬಾರಯ್ಯ || ೨ ||

ವೈರಾಗ್ಯಭಾಗ್ಯವ ಕೊಡುಬಾರಯ್ಯ | ನಾನಾ
ರೋಗದ ಭೇಷಜ ನೀ ಬಾರಯ್ಯ
ಜಾರುತದಾಯು ಬೇಗ ಬಾರಯ್ಯ | ಉ
ದಾರ ಪ್ರಸನ್ವೇಂಕಟ ನೀ ಬಾರಯ್ಯ || ೩ ||

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s