ದಾಸರೆಂದರೆ ಪುರಂದರದಾಸರಯ್ಯ (ಶ್ರೀ ವ್ಯಾಸರಾಜರು)

ರಾಗ: ಕಾಂಬೋಧಿ                 ತಾಳ: ಝಂಪೆ

ದಾಸರೆಂದರೆ ಪುರಂದರದಾಸರಯ್ಯ || ಪ ||
ವಾಸುದೇವ ಕೃಷ್ಣನ್ನ ಸೂಸಿ ಪೂಜಿಸುವ || ಅ.ಪ ||

ಗ್ರಾಸಕಿಲ್ಲದೇ ಪೋಗಿ ಪರರ ಮನೆಗಳ ಪೊಕ್ಕು
ದಾಸನೆಂದೂ ತುಲಸಿಮಾಲೆ ಧರಿಸೀ
ಬ್ಯಾಸರಿಲ್ಲದೆ ಅವರ ಕಾಡಿ ಬೇಡಿ ಬಳಲಿಸುತ
ಕಾಸುಗಳಿಸುವ ಅವನು ಹರಿದಾಸನೇ || ೧ ||

ಡಂಭಕದಿ ಹರಿಸ್ಮರಣೆ ಮಾಡಿ ಜನರಾ ಮುಂದೆ
ಸಂಭ್ರಮದಿ ತಾನುಂಬ ಊಟ ಬಯಸಿ
ಅಂಬುಜೋದ್ಭವಪಿತನ ಆಗಮಗಳರಿಯದೆಲೆ
ತಂಬೂರಿ ಮೀಟಲವ ಹರಿದಾಸನೇ || ೨ ||

ಯಾಯಿವಾರವಮಾಡಿ ವಿಪ್ರರಿಗೆ ಮೃಷ್ಟಾನ್ನ
ಪ್ರೀಯದಲಿ ತಾನೊಂದು ಕೊಡದೆ ಲೋಭಿ
ಮಾಯ ಸಂಸಾರದಲಿ ಮಮತೆ ಹೆಚ್ಚಾಗಿಟ್ಟು
ಗಾಯನವ ಮಾಡಲವ ಹರಿದಾಸನೇ || ೩ ||

ಪಾಠಕನ ತೆರೆನಂತೆ ಪದಗಳನು ತಾ ಬೊಗಳಿ
ಕೂಟಜನರಾ ಮನವ ಸಂತೋಷಪಡಿಸಿ
ಗೂಟನಾಮಗಳಿಟ್ಟು ಕೊಟ್ಟರಿಯೇ ತಾನೆನುತ
ತೂಟಕವ ಮಾಡಲವ ಹರಿದಾಸನೇ || ೪ ||

ನೀತಿಯೆಲ್ಲವನರಿತು ನಿಗಮವೇದ್ಯನ ನಿತ್ಯ
ವಾತಸುತನಲ್ಲಿಹನ ವರ್ಣಿಸುತ
ಗೀತ ನರ್ತನದಿಂದ ಕೃಷ್ಣನ್ನ ಪೂಜಿಸುವ
ಪೂತಾತ್ಮ ಪುರಂದರ ದಾಸರಿವರಯ್ಯ || ೫ ||

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s