ಎನ್ನ ಬಿಂಬಮೂರುತಿಯ (ಶ್ರೀ ವ್ಯಾಸರಾಜರು)

ರಾಗ – ಕಾಂಬೋಧಿ  ತಾಳ – ಆಟ

ಎನ್ನ ಬಿಂಬಮೂರುತಿಯ ಪೂಜಿಪೆನು ನಾನು || ಪ ||
ಮನಮುಟ್ಟಿ ಅನುದಿನ ಮರೆಯದೆ ಮರೆಯದೆ || ಅ.ಪ ||

ಗಾತ್ರವೇ ಮಂದಿರ ಹೃದಯವೇ ಮಂಟಪ
ನೇತ್ರವೇ ಮಹದೀಪ ಹಸ್ತಚಾಮರವು
ಯಾತ್ರೆಯೇ ಪ್ರದಕ್ಷಿಣೆ ಶಯನವೇ ನಮಸ್ಕಾರ
ಸ್ತೋತ್ರ ಮಾತುಗಳೆಲ್ಲ ಮಂತ್ರಗಳೂ || ೧ ||

ನುಡಿವ ಶಬ್ದಗಳೆಲ್ಲ ಪುಷ್ಪಗಳಾದವು
ನಡೆವುದೆಲ್ಲವು ಬಹು ನಟನೆಗಳು
ಉಡುವ ಹೊದ್ದಿಕೆಯೆಲ್ಲ ಚಿತ್ರವಾದ ವಸ್ತ್ರ
ತೊಡುವ ಭೂಷಣಗಳು ಶ್ರೀಹರಿಗೆ ಆಭರಣ || ೨ ||

ಧರಿಸಿದ ಶ್ರೀಗಂಧ ಹೃದಯಕ್ಕೆ ಗಂಧವು
ಶಿರದೊಳೇ ಮುಡಿವ ಪುಷ್ಪವೆ ಮಾಲಿಕೆ
ಸ್ಥಿರವಾಗಿ ನೇಹದಿಂ ಕೂಡಿದ ಬುದ್ಧಿಯು
ಸ್ಮರಿಸಿ ಉಂಡನ್ನವೆ ಹರಿನೈವೇದ್ಯವೂ || ೩ ||

ಎನ್ನ ಸ್ವರೂಪವೆಂಬ ರನ್ನದ ಕನ್ನಡಿ
ಎನ್ನ ಮನೋವೃತ್ತಿಯೆಂಬುದೆ ಕ್ಷೇತ್ರವು
ಇನ್ನು ನುಡಿವಾ ಹರಿನಾಮಾಮೃತವೆ ತೀರ್ಥ
ಎನ್ನ ಮಂದಿರ ಮಧ್ಯ ಮಹಸಿಂಹಾಸನಾ || ೪ ||

ಅನ್ಯ ಸಾಧನವೇಕೆ ಅನ್ಯ ಪ್ರತಿಮೆ ಏಕೆ
ಅನ್ಯವಾದ ಮಂತ್ರ ತಂತ್ರಗಳೇಕೆ
ಎನ್ನಲ್ಲಿ ಭರಿತ ಸಾಧನಗಳು ಇರಲಾಗಿ
ಚನ್ನಾಗಿ ಶ್ರೀಕೃಷ್ಣಸ್ವಾಮಿಯ ಪೂಜಿಪೆ || ೫ ||

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s