ಶರಣು ಸಿದ್ಧಿ ವಿನಾಯಕ (ಶ್ರೀ ಪುರಂದರ ದಾಸರು)

ರಾಗ: ಸೌರಾಷ್ಟ್ರ  ತಾಳ: ತ್ರಿಪುಟ

ಶರಣು ಸಿದ್ಧಿ ವಿನಾಯಕ ಶರಣು ವಿದ್ಯಾಪ್ರದಾಯಕ || ಪ ||
ಶರಣು ಪಾರ್ವತಿ ತನಯ ಮೂರುತಿ ಶರಣು ಮೂಷಕ ವಾಹನ || ಅ.ಪ ||

ನಿಟಿಲ ನೇತ್ರನ ದೇವಿಸುತನೆ ನಾಗಭೂಷಣ ಪ್ರೀಯನೇ
ಕಟಿತಟಾಂಕಿತ ಕೋಮಲಾಂಗನೆ ಕರ್ಣಕುಂಡಲ ಧಾರನೆ || ೧ ||

ಬಟ್ಟ ಮುತ್ತಿನ ಪದಕ ಹಾರನೆ ಬಾಹು ಹಸ್ತ ಚತುಷ್ಟನೆ
ಇಟ್ಟ ತೊಡುಗೆಯ ಹೇಮ ಕಂಕಣ ಪಾಶ ಅಂಕುಶ ಧಾರನೆ || ೨ ||

ಕುಕ್ಷಿ ಮಹಾಲಂಬೋದರನೆ ಇಕ್ಷು ಚಾಪನ ಗೆಲಿದನೇ
ಪಕ್ಷಿವಾಹನ ಶ್ರೀಪುರಂದರ ವಿಠ್ಠಲನ ನಿಜ ದಾಸನೇ || ೩ ||

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s