ಶ್ರೀ ವೇದವ್ಯಾಸ ಸುಳಾದಿ (ಶ್ರೀ ವಿಜಯದಾಸರು)

ವೇದವ್ಯಾಸ ದೇವರು

ಧ್ರುವತಾಳ –

ಯತಿಗಳ ಶಿರೋರತುನಾ ಸತಿಯ ಅವಿಯೋಗಿ
ರತಿಪತಿ ಜನಕಾ ಸ್ವರತ ಸ್ವಪ್ರಕಾಶಿತ
ಅತಿತಾದ್ಭುತ ಮಹಿಮ ಪತಿತ ಪಾವನನಾಮಾ
ನತಜನ ಸುರಧೇನು ದಿತಿಜತಿಮಿರಭಾನು
ಅತಿ ದೂರ ದೂರಸಂತತ ದಯಾಪರ
ಚತುರ ನಾನಾ ಸುರತತಿ ಕರಕಮಲಾ-
ರ್ಚಿತಪಾದ ಸುಂದರ ದೀನ ಮಂದಾರ
ಪ್ರತರ್ದನನಾಮ ನಮ್ಮ ವಿಜಯವಿಠ್ಠಲ ಸತ್ಯ-
ವತಿಸೂನು ಜಗದೊಳು ಪ್ರತಿಯಿಲ್ಲದ ದಾತಾ || ೧ ||

ಮಟ್ಟತಾಳ –

ಜ್ಞಾನಮಯಾಕಾರ ಜ್ಞಾನಮಯಾನಂದಾ
ಜ್ಞಾನಮಯೈಶ್ವರ್ಯ ಜ್ಞಾನಮಯವರ್ನ
ಜ್ಞಾನಮಯ ತೇಜಾ ಜ್ಞಾನಮಯ ಶಕ್ತಿ
ಜ್ಞಾನ ಮಯಾಂಬುಧಿ ಜ್ಞಾನವಿಲೋಲ ನಾ-
ಮಾನಿ ವಿಜಯ ವಿಠ್ಠಲನೆ ನಿನಗೆ ಸಮಾ
ಮೌನಿ ವ್ರತ ಧೃತನೆ ಜ್ಞಾನ ಸುಖ ಸಾಂದ್ರಾ || ೨ ||

ತ್ರಿವಿಡಿತಾಳ –

ಕಲಿಯ ವ್ಯಾಪಾರ ವೆಗ್ಗಳವಾಗಿ ವ್ಯಾಪಿಸಿ
ಸಲೆ ಧರ್ಮಾವಳಿಗಳ
ಅಳಿದು ಪೋಗಿರಲಾಗಿ
ಸುಲಭ ಜ್ಞಾನವೆಲ್ಲ ಮಲಿನದಿಂದಲಿ ಕೆಟ್ಟು
ಇಳಿಯೊಳು ಉತ್ತಮ ಸಂಪ್ರದಾಯಕದಾ
ಸುಳುವು ಕಾಣದೆ ಪೋಗಿ ಅಳಲಿ ಗೀರ್ವಾಣರು
ಜಲಜ ಸಂಭವನು ಒಂದಾಗಿ ನಿಂದೂ
ತಲೆವಾಗಿ ಉಸಿರಲು ಬಲುವಾಗಿ
ವಶಿಷ್ಠ ಕುಲದಲ್ಲಿ ಜನಿಸೀದ ಬಲದೈವವೇ
ನಳಿನಾಕ್ಷ ಮಹಸಿರಿ ವಿಜಯ ವಿಟ್ಠಲ ಬದರಿ-
ನಿಲಯ ನಿನ್ನ ಲೀಲೆಗೆ ನೆಲೆಯಾವದೋ ಜೀಯಾ || ೩ ||

ಅಟ್ಟತಾಳ –

ಪರಾಶರ ಉದರದಲ್ಲಿ ಒಂದು ಮೂರಾರು ಪುರಾಣ ವಿರಚಿಸಿ
ಅದರೊಳು-
ಆರು ಸತ್ವ ರಾಜಸ ತರುವಾಯ
ಆರು ತಾಮಸ ಇನಿತಷ್ಟ ದಶವೆಂದು ಧಾರುಣಿ ತುಂಬಲು
ಕರುಣದಿಂದ ಸೂರಿ ಮುಕ್ತರಿಗೆ ನಿತ್ಯ ಸಂಸಾರಿಗೆ
ಘೋರತಮಸಿಗೀ ಮೂರು ಪರಿಮಾಡಿ
ಕಾರಣ ವೆನಿಸಿ ಪ್ರತಿಷ್ಠಿಸಿ ಕಲಿಯ ನಿ-
ವಾರಣವನು ಮಾಡಿದ ಭಾರತಕರ್ತನೆ ಸುಜ-
ನರಿಗೆ ತೋರಿದ ದ್ವಯಪಾಯನ ಮುನಿ
ಈರೇಳು ಭುವನದೊಳಾರು ನಿನಗೆ ಎಣೆ
ಕಾರುಣ್ಯನಿಧಿ ಪುಣ್ಯ ವಿಜಯವಿಟ್ಠಲ ಮುನಿ-
ವರೇಣ್ಯ ಸುರರಗ್ರ ಗಣ್ಯ ನಿರ್ವಿಣ್ಯಾ || ೪ ||

ಆದಿತಾಳ –

ತಮ ಸಂಬಂಧವ ಕಳೆದು ವಿಮಲ ಸುಜ್ಞಾನವನ್ನು
ಅಮರರಿಗೆ ಪಾಲಿಸಿದೆ ಅಮಿತ ತೇಜಸದಿಂದ
ಕಮಂಡಲು ದಂಡಕಾಷ್ಠ ಸಮೀಚಿನವಾದ ಕರ-
ಕಮಲದಲ್ಲಿ ಧರಿಸಿದಮಲ ಕಾಷಾಯಾಂಬರಾ-
ಗಮದರ್ಥ ಶಿಷ್ಯರಿಗೆ ಪ್ರಮೇಯಗಳ ಪೇಳುತ
ಕ್ರಮನೂರಾರು ಮಾಡಿದ ಕುಮತಿಯ ಪರಿಹರಿಸಿ
ದಮಯತೆ ನಾಮ ಯತಿ ವಿಜಯವಿಠಲನನು
ಪರಮ ಚಿತ್ರ ರಾಜ್ಯವನು ಕ್ರಿಮಿಯಿಂದ ಆಳಿಸಿದೆ || ೫ ||

ಜತೆ –

ಬಾದರಾಯಣ ಸುಖಕಾರಣ ಭಕುತರಿಗೆ
ವೇದವ್ಯಾಸನೆ ವಿಷ್ಣು ವಿಜಯ ವಿಠಲವ್ಯಾಸ || ೬ ||

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s