ಶ್ರೀ ಹರಿ-ವಾಯುಸ್ತುತಿಃ

ಈ ಹಿಂದೆ ಪಂಚಸ್ತುತಿಗಳಲ್ಲಿ ಒಂದಾದ ಶಿವಸ್ತುತಿಯನ್ನು ಕೊಟ್ಟಿರುತ್ತೇನೆ. ಈಗ ಜೀವೋತ್ತಮರಾದ ಮುಖ್ಯಪ್ರಾಣದೇವರ ಸ್ತುತಿ – ವಾಯುಸ್ತುತಿಯನ್ನು ಪ್ರಸ್ತುತಪಡಿಸುತ್ತಿದ್ದೇನೆ. ಪ್ರಾಯಶಃ ಮಾಧ್ವ ವೈಷ್ಣವರಲ್ಲಿ ವಾಯುಸ್ತುತಿಯ ಬಗ್ಗೆ ಕೇಳದವರು ಇಲ್ಲವೋ ಎನ್ನುವಷ್ಟು ವಿರಳ. ಮಹಾಮಹಿಮೋಪೇತವು, ಸರ್ವಾಭೀಷ್ಟಪ್ರದವೂ, ಮಂತ್ರತುಲ್ಯವು ಆದ ವಾಯುಸ್ತುತಿಯು ವಾಯುದೇವರ ಭಕ್ತಿಗೆ ಆದ್ಯ ಸಾಧನ. ವೈದಿಕ ಸಾಹಿತ್ಯದಲ್ಲಿ ಪವಮಾನ ಸೂಕ್ತವು ಮುಖ್ಯಪ್ರಾಣನನ್ನು ಕೊಂಡಾಡಿದರೆ, ಪೌರುಷೇಯ ಸಾಹಿತ್ಯದಲ್ಲಿ ಅದಕ್ಕೆ ಸರಿಸಮಾನವಾದದ್ದು ವಾಯುಸ್ತುತಿ. ವಾಯುಸ್ತುತಿಯನ್ನೇ ಸಾಧನೆಯಾಗಿ ಮಾಡಿಕೊಂಡ ಸಾಧಕರನ್ನು ನಾನು ನೋಡಿರುತ್ತೆನೆ.

ಶ್ರೀಹರಿ-ವಾಯುಸ್ತುತಿಃ

ಶ್ರೀಹರಿ-ವಾಯುಸ್ತುತಿಃ

ಆಚಾರ್ಯ ಮಧ್ವರ ಸಾಕ್ಷಾತ್ ಶಿಷ್ಯರು, ಅಂತರಂಗ ಭಕ್ತರು ಆದ ತ್ರಿವಿಕ್ರಮಪಂಡಿತರಿಗೆ ದೃಷ್ಟವಾದ ಈ ಕೃತಿ ಆಚಾರ್ಯರ ಅನುಗ್ರಹಕ್ಕೆ ಪಾತ್ರವಾಗಿದೆ. ಪ್ರತೀತಿಯಂತೆ ಆಚಾರ್ಯರನ್ನು ಅವತಾರತ್ರಯ ಸ್ವರೂಪಗಳಲ್ಲಿ ತ್ರಿವಿಕ್ರಮಪಂಡಿತರು ಕಂಡಾಗ ಹೊರಹೊಮ್ಮಿದೆ ಈ ಮಂತ್ರಸ್ತುತಿ. ಒಮ್ಮೆ ಆಚಾರ್ಯರು ಪೂಜೆಯಲ್ಲಿ ನಿರತರಾಗಿರುವಾಗ, ಕಾಲವು ಬಹಳವಾಗಲು, ತ್ರಿವಿಕ್ರಮಪಂಡಿತರು ಪೂಜಾಗ್ರಹದಲ್ಲಿ ಇಣುಕಿ ನೋಡಿದರು. ಆಗ ಅವರಿಗೆ ಅದ್ಭುತ ಅವತಾರತ್ರಯ ಸ್ವರೂಪಗಳು ತಮ್ಮ ಇಷ್ಟ ದೈವತಗಳನ್ನು ಅರ್ಚಿಸುತ್ತಿರುವುದು ಕಂಡಿತು (ಹನುಮರೂಪದಿಂದ ರಾಮಚಂದ್ರ, ಭೀಮರೂಪದಿಂದ ಕೃಷ್ಣ, ಮಧ್ವರೂಪದಿಂದ ವೇದವ್ಯಾಸ). ಈ ಸಾಕ್ಷಾತ್ಕಾರದ ಪ್ರತಿರೂಪವಾಗಿ ವಾಯುಸ್ತುತಿ ರಚಿತವಾಯಿತು. ಈ ಘಟನೆ ಕೆಲವರು ಉಡುಪಿಯಲ್ಲಿ ಎಂತಲು, ಕೆಲವರು ಬದರಿಯಲ್ಲಿ ನಡೆದದ್ದು ಎಂತಲೂ ಹೇಳಿದ್ದಾರೆ. ತ್ರಿವಿಕ್ರಮಪಂಡಿತರು ಆಚಾರ್ಯರ ಅಂತರಂಗ ಭಕ್ತರಾಗಿದ್ದು ಅವರ ಸಂಪೂರ್ಣ ಅನುಗ್ರಹಕ್ಕೆ ಪಾತ್ರರಾಗಿದ್ದವರಾಗಿದ್ದರು, ಆದ್ದರಿಂದ ಅವರಿಗೆ ಆ ಸ್ವರೂಪಗಳ ಅನುಷ್ಟಾನ, ದರ್ಶನ ನಿರಂತರವಾಗಿದ್ದುದು ಸಹಜ. ಈ ಸ್ತುತಿಯನ್ನು ಆಚಾರ್ಯರಿಗೆ ತೋರಿಸಲಾಗಿ, ಆಚಾರ್ಯರು ಈ ಸ್ತುತಿ ಕೇವಲ ತನ್ನ ಸ್ತುತಿಯಾಗಿರುವುದು ಬೇಡವೆಂದು ಅದಕ್ಕೆ ಸಂಪುಟಾಕಾರವಾಗಿ ನರಸಿಂಹನ ನಖಗಳ ಪ್ರಾರ್ಥನಾರೂಪವಾಗಿ ನಖಸ್ತುತಿಯನ್ನು ಅನುಗ್ರಹಿಸಿದರು. ಈ ರೀತಿ ವಾಯುಸ್ತುತಿಯ ಆದ್ಯಂತಗಳಲ್ಲಿ ನಖಸ್ತುತಿಯ ಪಾರಾಯಣ ವಿದಿತ, ಇದಕ್ಕೆ ಆ ಸಿಂಹರೂಪಿ ಪರಮಾತ್ಮನೇ ಶ್ರೀರಕ್ಷೆ. ಆದ್ದರಿಂದ ಇದನ್ನು ಶ್ರೀಹರಿವಾಯುಸ್ತುತಿಯೆಂದು ಕರೆಯಲಾಗುತ್ತದೆ.

ಹಿರಿಯರು ಜ್ಞಾನಿಗಳು ವಾಯುಸ್ತುತಿಯ ಪ್ರತಿಪದ್ಯಕ್ಕು ಒಂದು ವಿಶೇಷ ಫಲಪ್ರಾಪ್ತಿಯನ್ನು ಸೂಚಿಸಿದ್ದಾರೆ. ಇವುಗಳ ಬಗೆಗೆ ಮುಂದೆ ವಿವರವಾಗಿ ಬರೆಯುತ್ತೇನೆ. ಆದರೆ ಈ ಮಹಾಸ್ತೋತ್ರದ ಪ್ರಮುಖ ಫಲ ಜೀವೋತ್ತಮ ವಾಯುದೇವರ ಅನುಗ್ರಹ, ತತ್ಫಲ ಸರ್ವೋತ್ತಮ ಶ್ರೀಹರಿಯ ಪ್ರಾಪ್ತಿ. ವಾಯುಸ್ತುತಿಯ ಪಾರಾಯಣದ ನಂತರ ಖಿಲವಾಯುಸ್ತುತಿಯನ್ನು, ಲಘುವಾಯುಸ್ತುತಿಯನ್ನು ಪಠಿಸುವುದು ಸಂಪ್ರದಾಯ. ವಾಯುಸ್ತುತಿಯನ್ನು ಪುರಶ್ಚರಣ ರೂಪದಿಂದ ಪಾರಾಯಣ ಮಾಡುವುದು ಅತ್ಯಂತ ವಿಶಿಷ್ಟ. ಮುಂದೆ ಇವುಗಳ ಬಗೆಗೆ ಸಹ ತಿಳಿದುಕೊಳ್ಳೋಣ. ಇನ್ನು ಶ್ರೀಹರಿವಾಯುಸ್ತುತಿ.

ಶ್ರೀಹರಿ-ವಾಯುಸ್ತುತಿಃ

ಶ್ರೀನರಸಿಂಹ-ನಖ-ಸ್ತುತಿಃ

ಪಾಂತ್ವಸ್ಮಾನ್ ಪುರುಹೂತ-ವೈರಿ-ಬಲವನ್-ಮಾತಂಗ-ಮಾದ್ಯದ್-ಘಟಾ-
ಕುಂಭೋಚ್ಚಾದ್ರಿ-ವಿಪಾಟನಾಧಿಕ-ಪಟು-ಪ್ರತ್ಯೇಕ-ವಜ್ರಾಯಿತಾಃ |
ಶ್ರೀಮತ್-ಕಂಠೀರವಾಸ್ಯ-ಪ್ರತತ-ಸು-ನಖರಾ ದಾರಿತಾರಾತಿ-ದೂರ-
ಪ್ರಧ್ವಸ್ತ-ಧ್ವಾಂತ-ಶಾಂತ-ಪ್ರವಿತತ-ಮನಸಾ ಭಾವಿತಾ ನಾಕಿವೃಂದೈಃ (ಭೂರಿ-ಭಾಗೈಃ) || ೧ ||

ಲಕ್ಷ್ಮೀ-ಕಾಂತ ಸಮಂತತೋಽಪಿ ಕಲಯನ್ ನೈವೇಶಿತುಸ್ತೇ ಸಮಂ
ಪಶ್ಯಾಮ್ಯುತ್ತಮ-ವಸ್ತು ದೂರ-ತರತೋಽಪಾಸ್ತಂ ರಸೋ ಯೋಽಷ್ಟಮಃ |
ಯದ್-ರೋಷೋತ್ಕರ-ದಕ್ಷ-ನೇತ್ರ-ಕುಟಿಲ-ಪ್ರಾಂತೋತ್ಥಿತಾಗ್ನಿ-ಸ್ಫುರತ್-
ಖದ್ಯೋತೋಪಮ-ವಿಸ್ಫುಲಿಂಗ-ಭಸಿತಾ ಬ್ರಹ್ಮೇಶ-ಶಕ್ರೋತ್ಕರಾಃ || ೨ ||

|| ಇತಿ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯವಿರಚಿತಂ ಶ್ರೀನರಸಿಂಹನಖಸ್ತುತಿಃ ಸಂಪೂರ್ಣಾ ||

[ ಶ್ರೀಮುಖ್ಯಪ್ರಾಣಧ್ಯಾನಮ್
ಉದ್ಯದ್ರವಿಪ್ರಕರಸನ್ನಿಭಮಚ್ಯುತಾಂಕೇ
ಸ್ವಾಸೀನಮಸ್ಯ ನುತಿನಿತ್ಯವಚಃಪ್ರವೃತ್ತಿಮ್ |
ಧ್ಯಾಯೇದ್ಗದಾಭಯಕರಂ ಸುಕೃತಾಂಜಲಿಂ ತಂ
ಪ್ರಾಣಂ ಯಥೇಷ್ಟತನುಮುನ್ನತಕರ್ಮಶಕ್ತಿಮ್ || ]

ಶ್ರೀವಾಯು-ಸ್ತುತಿಃ

ಶ್ರೀಮದ್-ವಿಷ್ಣ್ವಂಘ್ರಿ-ನಿಷ್ಠಾತಿಗುಣ-ಗುರು-ತಮ-ಶ್ರೀಮದಾನಂದ-ತೀರ್ಥ-
ತ್ರೈಲೋಕ್ಯಾಚಾರ್ಯ-ಪಾದೋಜ್ಜ್ವಲ-ಜಲಜ-ಲಸತ್-ಪಾಂಸವೋಽಸ್ಮಾನ್-ಪುನಂತು |
ವಾಚಾಂ ಯತ್ರ ಪ್ರಣೇತ್ರೀ ತ್ರಿ-ಭುವನ-ಮಹಿತಾ ಶಾರದಾ ಶಾರದೇಂದು-
ಜ್ಯೋತ್ಸ್ನಾ-ಭದ್ರ-ಸ್ಮಿತ-ಶ್ರೀ-ಧವಳಿತ-ಕಕುಭಾ ಪ್ರೇಮ-ಭಾರಂ ಬಭಾರ || ೧ ||

ಉತ್ಕಂಠಾಕುಂಠ-ಕೋಲಾಹಲ-ಜವ-ವಿಜಿತಾಜಸ್ರ-ಸೇವಾನು-ವೃದ್ಧ-
ಪ್ರಾಜ್ಞಾತ್ಮ-ಜ್ಞಾನ-ಧೂತಾಂಧ-ತಮಸ-ಸು-ಮನೋ-ಮೌಳಿ-ರತ್ನಾವಲೀನಾಮ್ |
ಭಕ್ತ್ಯುದ್ರೇಕಾವ-ಗಾಢ-ಪ್ರ-ಘಟನ-ಸ-ಘಟಾತ್-ಕಾರ-ಸಂಘೃಷ್ಯಮಾಣ-
ಪ್ರಾಂತ-ಪ್ರಾಗ್ರ್ಯಾಂಘ್ರಿ-ಪೀಠೋತ್ಥಿತ-ಕನಕ-ರಜಃ-ಪಿಂಜರಾರಂಜಿತಾಶಾಃ || ೨ ||

ಜನ್ಮಾಧಿ-ವ್ಯಾಧ್ಯುಪಾಧಿ-ಪ್ರತಿ-ಹತಿ-ವಿರಹ-ಪ್ರಾಪಕಾಣಾಂ ಗುಣಾನಾಂ
ಅಗ್ರ್ಯಾಣಾಮರ್ಪಕಾಣಾಂ ಚಿರಮುದಿತ-ಚಿದಾನಂದ-ಸಂದೋಹ-ದಾನಾಮ್ |
ಏತೇಷಾಮೇಷ ದೋಷ-ಪ್ರಮುಷಿತ-ಮನಸಾಂ ದ್ವೇಷಿಣಾಂ ದೂಷಕಾಣಾಂ
ದೈತ್ಯಾನಾಮಾರ್ತಿಮಂಧೇ ತಮಸಿ ವಿ-ದಧತಾಂ ಸಂ-ಸ್ತವೇ ನಾಸ್ಮಿ ಶಕ್ತಃ || ೩ ||

ಅಸ್ಯಾವಿಷ್ಕರ್ತುಕಾಮಂ ಕಲಿ-ಮಲ-ಕಲುಷೇಽಸ್ಮಿನ್ ಜನೇ ಜ್ಞಾನ-ಮಾರ್ಗಂ
ವಂದ್ಯಂ ಚಂದ್ರೇಂದ್ರ-ರುದ್ರ-ದ್ಯು-ಮಣಿ-ಫಣಿ-ವಯೋ-ನಾಯಕಾದ್ಯೈರಿಹಾದ್ಯ |
ಮಧ್ವಾಖ್ಯಂ ಮಂತ್ರ-ಸಿದ್ಧಂ ಕಿಮುತ ಕೃತವತೋ ಮಾರುತಸ್ಯಾವ-ತಾರಂ
ಪಾತಾರಂ ಪಾರಮೇಷ್ಠ್ಯಂ ಪದಮಪ-ವಿಪದಃ ಪ್ರಾಪ್ತುರಾಪನ್ನ-ಪುಂಸಾಮ್ || ೪ ||

ಉದ್ಯದ್-ವಿ-ದ್ಯುತ್-ಪ್ರ-ಚಂಡಾಂ ನಿಜ-ರುಚಿ-ನಿಕರ-ವ್ಯಾಪ್ತ-ಲೋಕಾವ-ಕಾಶೋ
ಬಿಭ್ರದ್-ಭೀಮೋ ಭುಜೇ ಯೋಽಭ್ಯುದಿತ-ದಿನ-ಕರಾಭಾಂಗ-ದಾಢ್ಯ-ಪ್ರಕಾಂಡೇ |
ವೀರ್ಯೋದ್ಧಾರ್ಯಾ೦ ಗದಾಗ್ರ್ಯಾಮಯಮಿಹ ಸು-ಮತಿಂ ವಾಯು-ದೇವೋ ವಿ-ದಧ್ಯಾತ್
ಅಧ್ಯಾತ್ಮ-ಜ್ಞಾನ-ನೇತಾ ಯತಿ-ವರ-ಮಹಿತೋ ಭೂಮಿ-ಭೂಷಾ-ಮಣಿರ್ಮೇ || ೫ ||

ಸಂ-ಸಾರೋತ್ತಾಪ-ನಿತ್ಯೋಪ-ಶಮ-ದ-ಸ-ದಯ-ಸ್ನೇಹ-ಹಾಸಾಂಬು-ಪೂರ-
ಪ್ರೋದ್ಯದ್-ವಿದ್ಯಾನವದ್ಯ-ದ್ಯುತಿ-ಮಣಿ-ಕಿರಣ-ಶ್ರೇಣಿ-ಸಂ-ಪೂರಿತಾಶಃ |
ಶ್ರೀ-ವತ್ಸಾಂಕಾಧಿ-ವಾಸೋಚಿತ-ತರ-ಸರಳ-ಶ್ರೀ-ಮದಾನಂದ-ತೀರ್ಥ-
ಕ್ಷೀರಾಂಭೋಧಿರ್ವಿ-ಭಿಂದ್ಯಾದ್ ಭವದನಭಿ-ಮತಂ ಭೂರಿ ಮೇ ಭೂತಿ-ಹೇತುಃ || ೬ ||

ಮೂರ್ಧನ್ಯೇಷೋಽ೦ಜಲಿರ್ಮೇ ದೃಢ-ತರಮಿಹ ತೇ ಬದ್ಧ್ಯತೇ ಬಂಧ-ಪಾಶ-
ಚ್ಛೇತ್ರೇ ದಾತ್ರೇ ಸುಖಾನಾಂ ಭಜತಿ ಭುವಿ ಭವಿಷ್ಯದ್-ವಿ-ಧಾತ್ರೇ ದ್ಯು-ಭರ್ತ್ರೇ |
ಅತ್ಯಂತಂ ಸಂ-ತತಂ ತ್ವಂ ಪ್ರ-ದಿಶ ಪದ-ಯುಗೇ ಹಂತ ಸಂ-ತಾಪ-ಭಾಜಾಂ
ಅಸ್ಮಾಕಂ ಭಕ್ತಿಮೇಕಾಂ ಭಗವತ ಉತ ತೇ ಮಾಧವಸ್ಯಾಥ ವಾಯೋಃ || ೭ ||

ಸಾಭ್ರೋಷ್ಣಾಭೀಶು-ಶುಭ್ರ-ಪ್ರಭಮಭಯ ನಭೋ ಭೂರಿ-ಭೂ-ಭೃದ್-ವಿಭೂತಿ-
ಭ್ರಾಜಿಷ್ಣುರ್ಭೂರ್-ಋಭೂಣಾಂ ಭವನಮಪಿ ವಿಭೋಽಭೇದಿ ಬಭ್ರೇ ಬಭೂವೇ |
ಯೇನ ಭ್ರೂ-ವಿ-ಭ್ರಮಸ್ತೇ ಭ್ರಮಯತು ಸು-ಭೃಶಂ ಬಭ್ರುವದ್ ದುರ್ಭೃತಾಶಾನ್
ಭ್ರಾಂತಿರ್ಭೇದಾವ-ಭಾಸಸ್ತ್ವಿತಿ ಭಯಮಭಿ-ಭೂರ್ಭೋಕ್ಷ್ಯತೋ ಮಾಯಿ-ಭಿಕ್ಷೂನ್ || ೮ ||

ಯೇಽಮುಂ ಭಾವಂ ಭಜಂತೇ ಸುರ-ಮುಖ-ಸುಜನಾರಾಧಿತಂ ತೇ ತೃತೀಯಂ
ಭಾಸಂತೇ ಭಾಸುರೈಸ್ತೇ ಸಹ-ಚರ-ಚಲಿತೈಶ್ಚಾಮರೈಶ್ಚಾರು-ವೇಷಾಃ |
ವೈಕುಂಠೇ ಕಂಠ-ಲಗ್ನ-ಸ್ಥಿರ-ಶುಚಿ-ವಿಲಸತ್-ಕಾಂತಿ-ತಾರುಣ್ಯ-ಲೀಲಾ-
ಲಾವಣ್ಯಾಪೂರ್ಣ-ಕಾಂತಾ-ಕುಚ-ಭರ-ಸು-ಲಭಾಶ್ಲೇಷ-ಸಮ್ಮೋದ-ಸಾಂದ್ರಾಃ || ೯ ||

ಆನಂದಾನ್ ಮಂದ-ಮಂದಾ ದದತಿ ಹಿ ಮರುತಃ ಕುಂದ-ಮಂದಾರ-ನಂದ್ಯಾ-
ವರ್ತಾಮೋದಾನ್ ದಧಾನಾ ಮೃದು-ಪದಮುದಿತೋದ್-ಗೀತಕೈಃ ಸುಂದರೀಣಾಮ್ |
ವೃಂದೈರಾ-ವಂದ್ಯ-ಮುಕ್ತೇಂದ್ವಹಿಮ-ಗು-ಮದನಾಹೀಂದ್ರ-ದೇವೇಂದ್ರ-ಸೇವ್ಯೇ
ಮೌಕುಂದೇ ಮಂದಿರೇಽಸ್ಮಿನ್ನವಿರತಮುದಯನ್ಮೋದಿನಾಂ ದೇವ-ದೇವ || ೧೦ ||

ಉತ್ತಪ್ತಾಽತ್ಯುತ್ಕಟ-ತ್ವಿಟ್ ಪ್ರಕಟ-ಕಟಕಟ-ಧ್ವಾನ-ಸಂ-ಘಟ್ಟನೋದ್ಯದ್-
ವಿದ್ಯುದ್-ವ್ಯೂಢ-ಸ್ಫುಲಿಂಗ-ಪ್ರಕರ-ವಿ-ಕಿರಣೋತ್-ಕ್ವಾಥಿತೇ ಬಾಧಿತಾಂಗಾನ್ |
ಉದ್-ಗಾಢಂ ಪಾತ್ಯಮಾನಾ ತಮಸಿ ತತ-ಇತಃ ಕಿಂಕರೈಃ ಪಂಕಿಲೇ ತೇ
ಪಂಕ್ತಿರ್ಗ್ರಾವ್ಣಾಂ ಗರಿಮ್ಣಾ ಗ್ಲಪಯತಿ ಹಿ ಭವದ್-ದ್ವೇಷಿಣೋ ವಿದ್ವದಾದ್ಯ || ೧೧ ||

ಅಸ್ಮಿನ್ನಸ್ಮದ್-ಗುರೂಣಾಂ ಹರಿ-ಚರಣ-ಚಿರ-ಧ್ಯಾನ-ಸನ್ಮಂಗಲಾನಾಂ
ಯುಷ್ಮಾಕಂ ಪಾರ್ಶ್ವ-ಭೂಮಿಂ ಧೃತ-ರಣರಣಿಕ-ಸ್ವರ್ಗಿ-ಸೇವ್ಯಾಂ ಪ್ರಪನ್ನಃ |
ಯಸ್ತೂದಾಸ್ತೇ ಸ ಆಸ್ತೇಽಧಿ-ಭವಮ-ಸುಲಭ-ಕ್ಲೇಶ-ನಿರ್ಮೋಕಮಸ್ತ-
ಪ್ರಾಯಾನಂದಂ ಕಥಂಚಿನ್ನ ವಸತಿ ಸತತಂ ಪಂಚ-ಕಷ್ಟೇಽತಿಕಷ್ಟೇ || ೧೨ ||

ಕ್ಷುತ್-ಕ್ಷಾಮಾನ್ ರೂಕ್ಷ-ರಕ್ಷೋ-ರದ-ಖರ-ನಖರ-ಕ್ಷುಣ್ಣ-ವಿಕ್ಷೋಭಿತಾಕ್ಷಾನ್
ಆ-ಮಗ್ನಾನಂಧ-ಕೂಪೇ ಕ್ಷುರ-ಮುಖ-ಮುಖಿರೈಃ ಪಕ್ಷಿಭಿರ್ವಿ-ಕ್ಷತಾಂಗಾನ್ |
ಪೂಯಾಸೃಙ್-ಮೂತ್ರ-ವಿಷ್ಠಾ-ಕೃಮಿ-ಕುಲ-ಕಲಿಲೇ ತತ್-ಕ್ಷಣ-ಕ್ಷಿಪ್ತ-ಶಕ್ತ್ಯಾ-
ದ್ಯಸ್ತ್ರ-ವ್ರಾತಾರ್ದಿತಾಂಸ್ತ್ವದ್-ದ್ವಿಷ ಉಪ-ಜಿಹತೇ ವಜ್ರ-ಕಲ್ಪಾ ಜಳೂಕಾಃ || ೧೩ ||

ಮಾತರ್ಮೇ ಮಾತರಿಶ್ವನ್ ಪಿತರತುಲ-ಗುರೋ ಭ್ರಾತರಿಷ್ಟಾಪ್ತ-ಬಂಧೋ
ಸ್ವಾಮಿನ್ ಸರ್ವಾಂತರಾತ್ಮನ್ನಜರ ಜರಯಿತರ್ಜನ್ಮ-ಮೃತ್ಯಾಮಯಾನಾಮ್ |
ಗೋವಿಂದೇ ದೇಹಿ ಭಕ್ತಿಂ ಭವತಿ ಚ ಭಗವನ್ನೂರ್ಜಿತಾಂ ನಿರ್ನಿಮಿತ್ತಾಂ
ನಿರ್ವ್ಯಾಜಾಂ ನಿಶ್ಚಲಾಂ ಸದ್-ಗುಣ-ಗಣ-ಬೃಹತೀಂ ಶಾಶ್ವತೀಮಾಶು ದೇವ || ೧೪ ||

ವಿಷ್ಣೋರತ್ಯುತ್ತಮ-ತ್ವಾದಖಿಲ-ಗುಣ-ಗಣೈಸ್ತತ್ರ ಭಕ್ತಿಂ ಗರಿಷ್ಟಾಂ
ಆಶ್ಲಿಷ್ಟೇ ಶ್ರೀ-ಧರಾಭ್ಯಾಮಮುಮಥ ಪರಿ-ವಾರಾತ್ಮನಾ ಸೇವಕೇಷು |
ಯಃ ಸಂ-ಧತ್ತೇ ವಿರಿಂಚ-ಶ್ವಸನ-ವಿಹಗ-ಪಾನಂತ-ರುದ್ರೇಂದ್ರ-ಪೂರ್ವೇ-
ಷ್ವಾಧ್ಯಾಯಂಸ್ತಾರತಮ್ಯಂ ಸ್ಫುಟಮವತಿ ಸದಾ ವಾಯುರಸ್ಮದ್-ಗುರುಸ್ತಮ್ || ೧೫ ||

ತತ್ತ್ವ-ಜ್ಞಾನ್ ಮುಕ್ತಿ-ಭಾಜಃ ಸುಖಯಸಿ ಹಿ ಗುರೋ ಯೋಗ್ಯತಾ-ತಾರತಮ್ಯಾತ್
ಆ-ಧತ್ಸೇ ಮಿಶ್ರ-ಬುದ್ಧೀಂಸ್ತ್ರಿದಿವ-ನಿರಯ-ಭೂ-ಗೋ-ಚರಾನ್ ನಿತ್ಯ-ಬದ್ಧಾನ್ |
ತಾಮಿಸ್ರಾಂಧಾದಿಕಾಖ್ಯೇ ತಮಸಿ ಸು-ಬಹುಲಂ ದುಃಖಯಸ್ಯನ್ಯಥಾ-ಜ್ಞಾನ್
ವಿಷ್ಣೋರಾಜ್ಞಾಭಿರಿತ್ಥಂ ಶ್ರುತಿ-ಶತಮಿತಿ-ಹಾಸಾದಿ ಚಾಽಕರ್ಣಯಾಮಃ || ೧೬ ||

ವಂದೇಽಹಂ ತಂ ಹನೂಮಾನಿತಿ ಮಹಿತ-ಮಹಾ-ಪೌರುಷೋ ಬಾಹು-ಶಾಲೀ
ಖ್ಯಾತಸ್ತೇಽಗ್ರ್ಯೋಽವ-ತಾರಃ ಸಹಿತ ಇಹ ಬಹು-ಬ್ರಹ್ಮ-ಚರ್ಯಾದಿ-ಧರ್ಮೈಃ |
ಸ-ಸ್ನೇಹಾನಾಂ ಸಹಸ್ವಾನಹರಹರಿತಂ ನಿರ್ದಹನ್ ದೇಹ-ಭಾಜಾಂ
ಅಂಹೋ-ಮೋಹಾಪಹೋ ಯಃ ಸ್ಪೃಹಯತಿ ಮಹತೀಂ ಭಕ್ತಿಮದ್ಯಾಪಿರಾಮೇ || ೧೭ ||

ಪ್ರಾಕ್ ಪಂಚಾಶತ್-ಸಹಸ್ರೈರ್ವ್ಯವಹಿತಮಹಿತಂ ಯೋಜನೈಃ ಪರ್ವತಂ ತ್ವಂ
ಯಾವತ್ ಸಂ-ಜೀವನಾದ್ಯೌಷಧ-ನಿಧಿಮಧಿಕ-ಪ್ರಾಣ ಲಂಕಾಮನೈಷೀಃ |
ಅದ್ರಾಕ್ಷೀದುತ್-ಪತಂತಂ ತತ ಉತ ಗಿರಿಮುತ್-ಪಾಟಯಂತಂ ಗೃಹೀತ್ವಾ
ಯಾಂತಂ ಖೇ ರಾಘವಾಂಘ್ರೌ ಪ್ರಣತಮಪಿ ತದೈಕ-ಕ್ಷಣೇ ತ್ವಾಂ ಹಿ ಲೋಕಃ || ೧೮ ||

ಕ್ಷಿಪ್ತಂ ಪಶ್ಚಾತ್ ಸ-ಲೀಲಂ ಶತಮತುಲ-ಮತೇ ಯೋಜನಾನಾಂ ಸ ಉಚ್ಚಃ
ತಾವದ್ ವಿಸ್ತಾರವಾಂಶ್ಚಾಪ್ಯುಪಲ-ಲವ ಇವ ವ್ಯಗ್ರ-ಬುದ್ಧ್ಯಾ ತ್ವಾಯಾಽತಃ |
ಸ್ವ-ಸ್ವ-ಸ್ಥಾನ-ಸ್ಥಿತಾತಿ-ಸ್ಥಿರ-ಶಕಲ-ಶಿಲಾ-ಜಾಲ-ಸಂಶ್ಲೇಷ-ನಷ್ಟ-
ಚ್ಛೇದಾಂಕಃ ಪ್ರಾಗಿವಾಭೂತ್ ಕಪಿ-ವರ-ವಪುಷಸ್ತೇ ನಮಃ ಕೌಶಲಾಯ || ೧೯ ||

ದೃಷ್ಟ್ವಾ ದುಷ್ಟಾಧಿಪೂರಃ ಸ್ಫುಟಿತ-ಕನಕ-ಸದ್-ವರ್ಮ-ಘೃಷ್ಟಾಸ್ಥಿ-ಕೂಟಂ
ನಿಷ್ಪಿಷ್ಟಂ ಹಾಟಕಾದ್ರಿ-ಪ್ರಕಟ-ತಟ-ತಟಾಕಾತಿ-ಶಂಕೋ ಜನೋಽಭೂತ್ |
ಯೇನಾಽಜೌ ರಾವಣಾರಿ-ಪ್ರಿಯ-ನಟನ-ಪಟುರ್ಮುಷ್ಟಿರಿಷ್ಟಂ ಪ್ರದೇಷ್ಟುಂ
ಕಿಂ ನೇಷ್ಟೇ ಮೇ ಸ ತೇಽಷ್ಟಾಪದ-ಕಟಕ-ತಟಿತ್-ಕೋಟಿ-ಭಾಮೃಷ್ಟ-ಕಾಷ್ಟಃ || ೨೦ ||

ದೇವ್ಯಾದೇಶ-ಪ್ರಣೀತಿ-ದ್ರುಹಿಣ-ಹರ-ವರಾವದ್ಯ-ರಕ್ಷೋ-ವಿಘಾತಾ-
ದ್ಯಾಸೇವೋದ್ಯದ್-ದಯಾರ್ದ್ರಃ ಸಹ-ಭುಜಮಕರೋದ್ ರಾಮ-ನಾಮಾ ಮುಕುಂದಃ |
ದುಷ್ಪ್ರಾಪೇ ಪಾರಮೇಷ್ಠ್ಯೇ ಕರ-ತರಮತುಲಂ ಮೂರ್ದ್ನಿ ವಿನ್ಯಸ್ಯ ಧನ್ಯಂ
ತನ್ವನ್ ಭೂಯಃ ಪ್ರಭೂತ-ಪ್ರಣಯ-ವಿಕಸಿತಾಬ್ಜೇಕ್ಷಣಸ್ತ್ವೇಕ್ಷಮಾಣಃ || ೨೧ ||

ಜಘ್ನೇ ನಿಘ್ನೇನ ವಿಘ್ನೋ ಬಹುಲ-ಬಲ-ಬಕ-ಧ್ವಂಸನಾದ್ ಯೇನ ಶೋಚದ್-
ವಿಪ್ರಾನು-ಕ್ರೋಶ-ಪಾಶೈರಸು-ವಿಧೃತಿ-ಸುಖಸ್ಯೈಕ-ಚಕ್ರಾ-ಜನಾನಾಮ್ |
ತಸ್ಮೈ ತೇ ದೇವ ಕುರ್ಮಃ ಕುರು-ಕುಲ-ಪತಯೇ ಕರ್ಮಣಾ ಚ ಪ್ರಣಾಮಾನ್
ಕಿರ್ಮೀರಂ ದುರ್ಮತೀನಾಂ ಪ್ರಥಮಮಥ ಚ ಯೋ ನರ್ಮಣಾ ನಿರ್ಮಮಾಥ || ೨೨ ||

ನಿರ್ಮೃದ್ನನ್ನತ್ಯಯತ್ನಂ ವಿಜರ-ವರ ಜರಾ-ಸಂಧ-ಕಾಯಾಸ್ಥಿ-ಸಂಧೀನ್
ಯುದ್ಧೇ ತ್ವಂ ಸ್ವಧ್ವರೇ ವಾ ಪಶುಮಿವ ದಮಯನ್ ವಿಷ್ಣು-ಪಕ್ಷ-ದ್ವಿಡೀಶಮ್ |
ಯಾವತ್ ಪ್ರತ್ಯಕ್ಷ-ಭೂತಂ ನಿಖಿಲ-ಮಖ-ಭುಜಂ ತರ್ಪಯಾಮಾಸಿಥಾಸೌ
ತಾವತ್ಯಾಽಯೋಜಿ ತೃಪ್ತ್ಯಾ ಕಿಮು ವದ ಭಗವನ್ ರಾಜ-ಸೂಯಾಶ್ವ-ಮೇಧೇ || ೨೩ ||

ಕ್ಷ್ವೇಲಾಕ್ಷೀಣಾಟ್ಟ-ಹಾಸಂ ತವ ರಣಮರಿ-ಹನ್ನುದ್-ಗದೋದ್ದಾಮ-ಬಾಹೋಃ
ಬಹ್ವಕ್ಷೋಹಿಣ್ಯನೀಕ-ಕ್ಷಪಣ-ಸು-ನಿಪುಣಂ ಯಸ್ಯ ಸರ್ವೋತ್ತಮಸ್ಯ |
ಶುಶ್ರೂಷಾರ್ಥಂ ಚಕರ್ಥ ಸ್ವಯಮಯಮಿಹ ಸಂ-ವಕ್ತುಮಾನಂದ-ತೀರ್ಥ-
ಶ್ರೀಮನ್ನಾಮನ್ ಸಮರ್ಥಸ್ತ್ವಮಪಿ ಹಿ ಯವಯೋಃ ಪಾದ-ಪದ್ಮಂ ಪ್ರ-ಪದ್ಯೇ || ೨೪ ||

ದ್ರುಹ್ಯಂತೀಂ ಹೃದ್-ರುಹಂ ಮಾಂ ದ್ರುತಮನಿಲ ಬಲಾದ್ ದ್ರಾವಯಂತೀಮವಿದ್ಯಾ-
ನಿದ್ರಾಂ ವಿದ್ರಾವ್ಯ ಸದ್ಯೋ-ರಚನ-ಪಟುಮಥಾಽಪಾದ್ಯ ವಿದ್ಯಾ-ಸಮುದ್ರ |
ವಾಗ್-ದೇವೀ ಸಾ ಸು-ವಿದ್ಯಾ-ದ್ರವಿಣ-ದ ವಿದಿತಾ ದ್ರೌಪದೀ-ರುದ್ರ-ಪತ್ನ್ಯಾ
ದ್ಯುದ್-ರಿಕ್ತಾ ದ್ರಾಗಭದ್ರಾದ್ ರಹಯತು ದಯಿತಾ ಪೂರ್ವ-ಭೀಮಾಽಜ್ಞಯಾ ತೇ || ೨೫ ||

ಯಾಭ್ಯಾಂ ಶುಶ್ರೂಷುರಾಸೀಃ ಕುರು-ಕುಲ-ಜನನೇ ಕ್ಷತ್ರ-ವಿಪ್ರೋದಿತಾಭ್ಯಾಂ
ಬ್ರಹ್ಮಭ್ಯಾಂ ಬೃಂಹಿತಾಭ್ಯಾಂ ಚಿತಿ-ಸುಖ-ವಪುಷಾ ಕೃಷ್ಣ-ನಾಮಾಸ್ಪದಾಭ್ಯಾಮ್ |
ನಿರ್ಭೇದಾಭ್ಯಾಂ ವಿಶೇಷಾದ್ ದ್ವಿ-ವಚನ-ವಿಷಯಾಭ್ಯಾಮ-ಮೂಭ್ಯಾಮುಭಾಭ್ಯಾಂ
ತುಭ್ಯಂ ಚ ಕ್ಷೇಮ-ದೇಭ್ಯಃ ಸರಸಿಜ-ವಿಲಸಲ್ಲೋಚನೇಭ್ಯೋ ನಮೋಽಸ್ತು || ೨೬ ||

ಗಚ್ಛನ್ ಸೌಗಂಧಿಕಾರ್ಥಂ ಪಥಿ ಸ ಹನುಮತಃ ಪುಚ್ಛಮಚ್ಛಸ್ಯ ಭೀಮಃ
ಪ್ರೋದ್ದರ್ತುಂ ನಾಶಕತ್ ಸ ತ್ವಮುಮುರು-ವಪುಷಾ ಭೀಷಯಾಮಾಸ ಚೇತಿ |
ಪೂರ್ಣ-ಜ್ಞಾನೌಜಸೋಸ್ತೇ ಗುರು-ತಮ ವಪುಷೋಃ ಶ್ರೀಮದಾನಂದ-ತೀರ್ಥ-
ಕ್ರೀಡಾ-ಮಾತ್ರಂ ತದೇತತ್ ಪ್ರಮದ-ದ ಸು-ಧೀಯಾಂ ಮೋಹಕ ದ್ವೇಷ-ಭಾಜಾಮ್ || ೨೭ ||

ಬಹ್ವೀಃ ಕೋಟೀರಟೀಕಃ ಕುಟಿಲ-ಕಟು-ಮತೀನುತ್ಕಟಾಟೋಪ-ಕೋಪಾನ್
ದ್ರಾಕ್ ಚ ತ್ವಂ ಸ-ತ್ವರತ್ವಾಚ್ಛರಣ-ದ ಗದಯಾ ಪೋಥಯಾಮಾಸಿಥಾರೀನ್ |
ಉನ್ಮಥ್ಯಾತಥ್ಯ-ಮಿಥ್ಯಾತ್ವ-ವಚನ-ವಚನಾತ್-ಪಥ-ಸ್ಥಾಂಸ್ತಥಾಽನ್ಯಾನ್
ಪ್ರಾಯಚ್ಛಃ ಸ್ವ-ಪ್ರಿಯಾಯೈ ಪ್ರಿಯ-ತಮ-ಕುಸುಮಂ ಪ್ರಾಣ ತಸ್ಮೈ ನಮಸ್ತೇ || ೨೮ ||

ದೇಹಾದುತ್-ಕ್ರಾಮಿತಾನಾಮಧಿ-ಪತಿರಸತಾಮಕ್ರಮಾದ್ ವಕ್ರ-ಬುದ್ಧಿಃ
ಕ್ರುದ್ಧಃ ಕ್ರೋಧೈಕ-ವಶ್ಯಃ ಕ್ರಿಮಿರಿವ ಮಣಿಮಾನ್ ದುಷ್ಕೃತೀ ನಿಷ್ಕ್ರಿಯಾರ್ಥಮ್ |
ಚಕ್ರೇ ಭೂ-ಚಕ್ರಮೇತ್ಯ ಕ್ರಕಚಮಿವ ಸತಾಂ ಚೇತಸಃ ಕಷ್ಟ-ಶಾಸ್ತ್ರಂ
ದುಸ್ತರ್ಕಂ ಚಕ್ರ-ಪಾಣೇರ್ಗುಣ-ಗಣ-ವಿರಹಂ ಜೀವ-ತಾಂ ಚಾಧಿ-ಕೃತ್ಯ || ೨೯ ||

ತದ್-ದುಷ್ಪ್ರೇಕ್ಷಾನು-ಸಾರಾತ್ ಕತಿಪಯ-ಕು-ನರೈರಾದೃತೋಽನ್ಯೈರ್ವಿಸೃಷ್ಟೋ
ಬ್ರಹ್ಮಾಹಂ ನಿರ್ಗುಣೋಽಹಂ ವಿತಥಮಿದಮಿತಿ ಹ್ಯೇಷ ಪಾಷಂಡ-ವಾದಃ |
ತದ್-ಯುಕ್ತ್ಯಾಭಾಸ-ಜಾಲ-ಪ್ರಸರ-ವಿಷ-ತರೂದ್ದಾಹ-ದಕ್ಷ-ಪ್ರಮಾಣ-
ಜ್ವಾಲಾ-ಮಾಲಾ-ಧರಾಗ್ನಿಃ ಪವನ ವಿ-ಜಯತೇ ತೇಽವತಾರಸ್ತೃತೀಯಃ || ೩೦ ||

ಆಕ್ರೋಶಂತೋ ನಿರಾಶಾ ಭಯ-ಭರ ವಿವಶ-ಸ್ವಾಶಯಾಶ್ಚಿನ್ನ-ದರ್ಪಾಃ
ವಾಶಂತೋ ದೇಶ-ನಾಶಸ್ತ್ವಿತಿ ಬತ ಕು-ಧಿಯಾಂ ನಾಶಮಾಶಾ ದಶಾಽಶು |
ಧಾವಂತೋಽಶ್ಲೀಲ-ಶೀಲಾ ವಿತಥ-ಶಪಥ-ಶಾಪಾಶಿವಾಃ ಶಾಂತ-ಶೌರ್ಯಾಃ
ತ್ವದ್-ವ್ಯಾಖ್ಯಾ-ಸಿಂಹ-ನಾದೇ ಸಪದಿ ದದೃಶಿರೇ ಮಾಯಿ-ಗೋಮಾಯವಸ್ತೇ || ೩೧ ||

ತ್ರಿಷ್ವಪ್ಯೇವಾವ-ತಾರೇಷ್ವರಿಭಿರಪ-ಘೃಣಂ ಹಿಂಸಿತೋ ನಿರ್ವಿಕಾರಃ
ಸರ್ವ-ಜ್ಞಃ ಸರ್ವ-ಶಕ್ತಿಃ ಸಕಲ-ಗುಣ-ಗಣಾಪೂರ್ಣ-ರೂಪ-ಪ್ರಗಲ್ಭಃ |
ಸ್ವಚ್ಛಃ ಸ್ವಚ್ಛಂದ-ಮೃತ್ಯುಃ ಸುಖಯಸಿ ಸುಜನಂ ದೇವ ಕಿಂ ಚಿತ್ರಮತ್ರ
ತ್ರಾತಾ ಯಸ್ಯ ತ್ರಿ-ಧಾಮಾ ಜಗದುತ ವಶ-ಗಂ ಕಿಂಕರಾಃ ಶಂಕರಾದ್ಯಾಃ || ೩೨ ||

ಉದ್ಯನ್ಮಂದ-ಸ್ಮಿತ-ಶ್ರೀ-ಮೃದು ಮಧು-ಮಧುರಾಲಾಪ-ಪೀಯೂಷ-ಧಾರಾ-
ಪೂರಾಸೇಕೋಪ-ಶಾಂತಾಸುಖ-ಸು-ಜನ-ಮನೋ-ಲೋಚನಾಪೀಯಮಾನಮ್ |
ಸಂ-ದ್ರಕ್ಷ್ಯೇ ಸುಂದರಂ ಸಂ-ದುಹದಿಹ ಮಹದಾನಂದಮಾನಂದ-ತೀರ್ಥ
ಶ್ರೀಮದ್-ವಕ್ತ್ರೇಂದು-ಬಿಂಬಂ ದುರಿತ-ನುದುದಿತಂ ನಿತ್ಯದಾಽಹಂ ಕದಾ ನು || ೩೩ ||

ಪ್ರಾಚೀನಾಚೀರ್ಣ-ಪುಣ್ಯೋಚ್ಚಯ-ಚತುರ-ತರಾಚಾರತಶ್ಚಾರು-ಚಿತ್ತಾನ್
ಅತ್ಯುಚ್ಚಾಂ ರೋಚಯಂತೀಂ ಶ್ರುತಿ-ಚಿತ-ವಚನಾಂ ಶ್ರಾವಕಾಂಶ್ಚೋದ್ಯ-ಚುಂಚೂನ್ |
ವ್ಯಾಖ್ಯಾಮುತ್-ಖಾತ-ದುಃಖಾಂ ಚಿರಮುಚಿತ-ಮಹಾಚಾರ್ಯ ಚಿಂತಾ-ರತಾಂಸ್ತೇ
ಚಿತ್ರಾಂ ಸಚ್ಛಾಸ್ತ್ರ-ಕರ್ತಶ್ಚರಣ-ಪರಿಚರಾಂಛ್ರಾವಯಾಸ್ಮಾಂಶ್ಚ ಕಿಂಚಿತ್ || ೩೪ ||

ಪೀಠೇ ರತ್ನೋಪಕ್ಲಪ್ತೇ ರುಚಿರ-ರುಚಿ-ಮಣಿ-ಜ್ಯೋತಿಷಾ ಸನ್ನಿಷಣ್ಣಂ
ಬ್ರಹ್ಮಾಣಂ ಭಾವಿನಂ ತ್ವಾಂ ಜ್ವಲತಿ ನಿಜ-ಪದೇ ವೈದಿಕಾದ್ಯಾ ಹಿ ವಿದ್ಯಾಃ |
ಸೇವಂತೇ ಮೂರ್ತಿಮತ್ಯಃ ಸು-ಚರಿತ ಚರಿತಂ ಭಾತಿ ಗಂಧರ್ವ-ಗೀತಂ
ಪ್ರತ್ಯೇಕಂ ದೇವ-ಸಂಸತ್ಸ್ವಪಿ ತವ ಭಗವನ್ ನರ್ತಿತ-ದ್ಯೋ-ವಧೂಷು || ೩೫ ||

ಸಾನುಕ್ರೋಶೈರಜಸ್ರಂ ಜನಿ-ಮೃತಿ-ನಿರಯಾದ್ಯೂರ್ಮಿ-ಮಾಲಾವಿಲೇಽಸ್ಮಿನ್
ಸಂಸಾರಾಬ್ಧೌ ನಿಮಗ್ನಾಂಛರಣಮಶರಣಾನಿಚ್ಛತೋ ವೀಕ್ಷ್ಯ ಜಂತೂನ್ |
ಯುಷ್ಮಾಭಿಃ ಪ್ರಾರ್ಥಿತಃ ಸನ್ ಜಲ-ನಿಧಿ-ಶಯನಃ ಸತ್ಯವತ್ಯಾಂ ಮಹರ್ಷೇಃ
ವ್ಯಕ್ತಶ್ಚಿನ್ಮಾತ್ರ-ಮೂರ್ತಿರ್ನ ಖಲು ಭಗವತಃ ಪ್ರಾಕೃತೋ ಜಾತು ದೇಹಃ || ೩೬ ||

ಅಸ್ತ-ವ್ಯಸ್ತಂ ಸಮಸ್ತ-ಶ್ರುತಿ-ಗತಮಧಮೈ ರತ್ನ-ಪೂಗಂ ಯಥಾಽ೦ಧೈಃ
ಅರ್ಥಂ ಲೋಕೋಲಕೃತ್ಯೈ ಗುಣ-ಗಣ-ನಿಲಯಃ ಸೂತ್ರಯಾಮಾಸ ಕೃತ್ಸ್ನಮ್ |
ಯೋಽಸೌ ವ್ಯಾಸಾಭಿಧಾನಸ್ತಮಹಮಹರಹರ್ಭಕ್ತಿತಸ್ತತ್-ಪ್ರಸಾದಾತ್
ಸದ್ಯೋ ವಿದ್ಯೋಪಲಬ್ಧ್ಯೈ ಗುರು-ತಮಮಗುರುಂ ದೇವ-ದೇವಂ ನಮಾಮಿ || ೩೭ ||

ಆಜ್ಞಾಮನ್ಯೈರಧಾರ್ಯಾ ಶಿರಸಿ ಪರಿ-ಸರದ್-ರಶ್ಮಿ-ಕೋಟೀರ-ಕೋಟೌ
ಕೃಷ್ಣಸ್ಯಾಕ್ಲಿಷ್ಟ-ಕರ್ಮಾ ದಧದನು-ಸ್ರರಣಾದರ್ಥಿತೋ ದೇವ-ಸಂಘೈಃ |
ಭೂಮಾವಾಗತ್ಯ ಭೂಮನ್ನಸು-ಕರಮಕರೋರ್ಬ್ರಹ್ಮ-ಸೂತ್ರಸ್ಯ ಭಾಷ್ಯಂ
ದುರ್ಭಾಷ್ಯಂ ವ್ಯಸ್ಯ ದಸ್ಯೋರ್ಮಣಿಮತ ಉದಿತಂ ವೇದ-ಸದ್-ಯುಕ್ತಿಭಿಸ್ತ್ವಮ್ || ೩೮ ||

ಭೂತ್ವಾ ಕ್ಷೇತ್ರೇ ವಿಶುದ್ಧೇ ದ್ವಿಜ-ಗಣ-ನಿಲಯೇ ರೂಪ್ಯ-ಪೀಠಭಿಧಾನೇ
ತತ್ರಾಪಿ ಬ್ರಹ್ಮ-ಜಾತಿಸ್ತ್ರಿ-ಭುವನ-ವಿಶದೇ ಮಧ್ಯ-ಗೇಹಾಖ್ಯ-ಗೇಹೇ |
ಪಾರಿ-ವ್ರಾಜ್ಯಾಧಿ-ರಾಜಃ ಪುನರಪಿ ಬದರೀಂ ಪ್ರಾಪ್ಯ ಕೃಷ್ಣಂ ಚ ನತ್ವಾ
ಕೃತ್ವಾ ಭಾಷ್ಯಾಣಿ ಸಮ್ಯಗ್ ವ್ಯತನುತ ಚ ಭವಾನ್ ಭಾರತಾರ್ಥ-ಪ್ರಕಾಶಮ್ || ೩೯ ||

ವಂದೇ ತಂ ತ್ವಾ ಸು-ಪೂರ್ಣ-ಪ್ರಮತಿಮನು-ದಿನಾಸೇವಿತಂ ದೇವ-ವೃಂದೈಃ
ವಂದೇ ವಂದಾರುಮೀಶೇ ಶ್ರಿಯ ಉತ ನಿಯತಂ ಶ್ರೀಮದಾನಂದ-ತೀರ್ಥಮ್ |
ವಂದೇ ಮಂದಾಕಿನೀ-ಸತ್-ಸರಿದಮಲ-ಜಲಾಸೇಕ-ಸಾಧಿಕ್ಯ-ಸಂಗಂ
ವಂದೇಽಹಂ ದೇವ ಭಕ್ತ್ಯಾ ಭವ-ಭಯ-ದಹನಂ ಸಜ್ಜನಾನ್ ಮೋದಯಂತಮ್ || ೪೦ ||

ಸು-ಬ್ರಹ್ಮಣ್ಯಾಖ್ಯ-ಸೂರೇಃ ಸುತ ಇತಿ ಸು-ಭೃಶಂ ಕೇಶವಾನಂದ-ತೀರ್ಥ-
ಶ್ರೀಮತ್-ಪಾದಾಬ್ಜ-ಭಕ್ತಃ ಸ್ತುತಿಮಕೃತ ಹರೇರ್ವಾಯು-ದೇವಸ್ಯ ಚಾಸ್ಯ |
ತತ್-ಪಾದಾರ್ಚಾದರೇಣ ಗ್ರಥಿತ-ಪದ-ಲಸನ್ಮಾಲಯಾ ತ್ವೇತಯಾ ಯೇ
ಸಂರಾಧ್ಯಾಮೂ ನಮಂತಿ ಪ್ರತತ-ಮತಿ-ಗುಣಾ ಮುಕ್ತಿಮೇತೇ ವ್ರಜಂತಿ || ೪೧ ||

ಪಿಡಿಎಫ್ ಆವೃತ್ತಿ|| ಇತಿ ಶ್ರೀತ್ರಿವಿಕ್ರಮ-ಪಂಡಿತಾಚಾರ್ಯ-ವಿರಚಿತಾ ವಾಯು-ಸ್ತುತಿಃ ಸಮಾಪ್ತಾ ||

ಶ್ರೀನರಸಿಂಹ-ನಖ-ಸ್ತುತಿಃ

ಪಾಂತ್ವಸ್ಮಾನ್ ಪುರುಹೂತ-ವೈರಿ-ಬಲವನ್-ಮಾತಂಗ-ಮಾದ್ಯದ್-ಘಟಾ-
ಕುಂಭೋಚ್ಚಾದ್ರಿ-ವಿಪಾಟನಾಧಿಕ-ಪಟು-ಪ್ರತ್ಯೇಕ-ವಜ್ರಾಯಿತಾಃ |
ಶ್ರೀಮತ್-ಕಂಠೀರವಾಸ್ಯ-ಪ್ರತತ-ಸು-ನಖರಾ ದಾರಿತಾರಾತಿ-ದೂರ-
ಪ್ರಧ್ವಸ್ತ-ಧ್ವಾಂತ-ಶಾಂತ-ಪ್ರವಿತತ-ಮನಸಾ ಭಾವಿತಾ ನಾಕಿವೃಂದೈಃ (ಭೂರಿ-ಭಾಗೈಃ) || ೧ ||

ಲಕ್ಷ್ಮೀ-ಕಾಂತ ಸಮಂತತೋಽಪಿ ಕಲಯನ್ ನೈವೇಶಿತುಸ್ತೇ ಸಮಂ
ಪಶ್ಯಾಮ್ಯುತ್ತಮ-ವಸ್ತು ದೂರ-ತರತೋಽಪಾಸ್ತಂ ರಸೋ ಯೋಽಷ್ಟಮಃ |
ಯದ್-ರೋಷೋತ್ಕರ-ದಕ್ಷ-ನೇತ್ರ-ಕುಟಿಲ-ಪ್ರಾಂತೋತ್ಥಿತಾಗ್ನಿ-ಸ್ಫುರತ್-
ಖದ್ಯೋತೋಪಮ-ವಿಸ್ಫುಲಿಂಗ-ಭಸಿತಾ ಬ್ರಹ್ಮೇಶ-ಶಕ್ರೋತ್ಕರಾಃ || ೨ ||

|| ಇತಿ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯವಿರಚಿತಂ ಶ್ರೀನರಸಿಂಹನಖಸ್ತುತಿಃ ಸಂಪೂರ್ಣಾ ||

ಶ್ರೀಹರಿವಾಯುಸ್ತುತಿ – ಖಿಲವಾಯುಸ್ತುತಿ, ಲಘುವಾಯುಸ್ತುತಿ, ಯಂತ್ರೋದ್ಧಾರಕ ಸ್ತೋತ್ರ ಸಹಿತ – ಪಿಡಿಎಫ್ ಆವೃತ್ತಿ (ದೊಡ್ಡ ಅಕ್ಷರಗಳಲ್ಲಿ – ೧೧ ಪುಟಗಳು)

Advertisements

One thought on “ಶ್ರೀ ಹರಿ-ವಾಯುಸ್ತುತಿಃ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s