ಚಿತ್ತಜನಯ್ಯನ ಚಿಂತಿಸು ಮನವೇ (ಶ್ರೀಪಾದರಾಜರು)

ರಾಗ – ಕಾಂಬೋಧಿ        ತಾಳ – ಆದಿತಾಳ

ಚಿತ್ತಜನಯ್ಯನ ಚಿಂತಿಸು ಮನವೇ
ಹೊತ್ತು ಕಳೆಯದೆ ಸರ್ವೋತ್ತಮನ ನೆನೆ ಮನವೆ || ಪ ||

ಕಾಲನ ದೂತರು ನೂಲು ಹಗ್ಗವ ತಂದು
ಕಾಲು ಕೈಗಳ ಕಟ್ಟಿ ಮ್ಯಾಲೆ ಕುಟ್ಟಿ
ಕಾಲಪಾಶದೊಳಿಟ್ಟು ಶೂಲದಿಂದಿರುವಾಗ
ಪಾಲಿಸುವರುಂಟೆ ಜಾಲವ ಮಾಡದೆ || ೧ ||

ದಂಡಧರನ ಭಟರು ಚಂಡಕೋಪದಿ ಬಂದು
ಕೆಂಡದ ನದಿಯ ತಡೆಗೆ ಕೊಂಡೊಯ್ದು
ಖಂಡಖಂಡವ ಕಿತ್ತು ಕೆಂಡದೊಳಿಡುವಾಗ
ಹೆಂಡಿರು ಮಕ್ಕಳು ಬಂದು ಬಿಡಿಸಬಲ್ಲರೆ ಮರುಳೆ || ೨ ||

ಅಂಗಳಿಗೆ ಡಬ್ಬಣಂಗಳ ಸೇರಿಸಿ ಎರಡು
ಕಂಗಳಿಗೆ ಸೀಸವ ಕಾಸಿ ಪೊಯ್ಯಲು
ತಂಗಿ ಅಕ್ಕ ಬಂದು ಭಂಗವ ಬಿಡಿಸುವರೆ
ಅಂಗವು ಸ್ಥಿರವಲ್ಲ ರಂಗವಿಠಲ ಬಲ್ಲ || ೩ ||

ಶಬ್ದಾರ್ಥ –
ಚಿತ್ತಜನಯ್ಯ : ಚಿತ್ತಜನೆಂದರೆ ಪರಮಾತ್ಮನ ಮನಸ್ಸಿನಿಂದ ಹುಟ್ಟಿದ ಮನ್ಮಥ, ಪ್ರದ್ಯುಮ್ನನು ಮನ್ಮಥನ ಅವತಾರ, ಆದ್ದರಿಂದ ಚಿತ್ತಜನಯ್ಯನೆಂದರೆ ಶ್ರೀಕೃಷ್ಣ.
ಕಾಲ, ದಂಡಧರ : ಮೃತ್ಯುವಾದ ಯಮಧರ್ಮ.
ಅಂಗಳು : ಬಾಯಿಯ ಮೇಲ್ಭಾಗ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s