ಶ್ರೀಶಿವಸ್ತುತಿ (ಶ್ರೀ ನಾರಾಯಣ ಪಂಡಿತಾಚಾರ್ಯ)

ಮಾಧ್ವ ವೈಷ್ಣವ ಸಂಪ್ರದಾಯದಲ್ಲಿ ಲಿಕುಚ ವಂಶದ ಹೆಸರು ಕೇಳದವರು ವಿರಳ. ಆಚಾರ್ಯ ಮಧ್ವರ ಸಾಕ್ಷಾತ್ ಶಿಷ್ಯರಾದ ಈ ತುಳು ಗ್ರಹಸ್ತ ಪಂಡಿತ ಮನೆತನ, ಶಾಸ್ತ್ರವಾಙ್ಮಯಕ್ಕೆ ಸಲ್ಲಿಸಿದ ಸೇವೆ ಅಪಾರ, ಅವಿಸ್ಮರಣೀಯ. ಆಚಾರ್ಯ ಮಧ್ವರ ಏಕಮೇವ ಜೀವನಿಯ ಆಕರವಾದ ಮಧ್ವವಿಜಯ ಇದೇ ಮನೆತನದವರಾದ ಶ್ರೀನಾರಾಯಣಪಂಡಿತರ ಮಹತ್ಕೃತಿ.ಇವರ ತಂದೆಯಾದ ಶ್ರೀತ್ರಿವಿಕ್ರಮಪಂಡಿತರು ಆಚಾರ್ಯರ ಅಂತರಂಗ ಭಕ್ತರು, ಆದ್ಯ ಟೀಕಾಕಾರರಲ್ಲಿ ಪ್ರಮುಖರು. ಇವರ ಕೃತಿಯಾದ ವಾಯುಸ್ತುತಿಯು ಜಗದ್ವಿಖ್ಯಾತಿಯ ಮಂತ್ರತುಲ್ಯವಾದ ಅವತಾರತ್ರಯಗಳ ಸ್ತುತಿ.
ಈ ಮನೆತನದವರ ನಾಲ್ಕು ಕೃತಿಗಳು (ನಾಲ್ಕು ಮತ್ತು ಒಂದು ಕೃತಿ ಮಧ್ವಾಚಾರ್ಯ ವಿರಚಿತ, ಆಶೀರ್ವದಿತ) ಬಹು ಪ್ರಸಿದ್ದ ಮತ್ತು ನಿತ್ಯ ಪಾರಾಯಣದಲ್ಲಿ ಬಳಕೆಯಲ್ಲಿರುವವು. ಶ್ರೀಮನ್ಮಧ್ವಾಚಾರ್ಯರ ನರಸಿಂಹ ನಖಸ್ತುತಿ, ಶ್ರೀತ್ರಿವಿಕ್ರಮಪಂಡಿತರ ವಾಯುಸ್ತುತಿ ಹಾಗು ವಿಷ್ಣುಸ್ತುತಿ, ಶ್ರೀನಾರಾಯಣಪಂಡಿತರ ನೃಸಿಂಹಸ್ತುತಿ ಹಾಗು ಶಿವಸ್ತುತಿ. ಪಂಚಸ್ತುತಿ, ಸ್ತುತಿಪಂಚಕಗಳೆಂದು ಕರೆಸಿಕೊಳ್ಳುವ ಇವು ಸಂಸ್ಕೃತ ಸ್ತ್ರೋತ್ರಸಾಹಿತ್ಯದಲ್ಲಿ ವಿಶಿಷ್ಟ ಕೃತಿಗಳು.
ಪ್ರಸಕ್ತ ಸ್ತುತಿ ಶಿವಸ್ತುತಿ.

ಶ್ರೀಶಿವಸ್ತುತಿಃ

ಶ್ರೀಶಿವಸ್ತುತಿಃ

ವೈಷ್ಣವ ಸಂಪ್ರದಾಯಗಳಲ್ಲಿ ರುದ್ರದೇವರ ಸ್ತುತಿ ಮಾಡಲ್ಪಟ್ಟ ಕೃತಿಗಳು ವಿರಳ, ಅವೆಲ್ಲವುಗಳಲ್ಲಿ ಇದು ಅರ್ಥ, ಶೈಲಿಗಳಲ್ಲಿ ಅತಿವಿಶಿಷ್ಟ. ನಾರಾಯಣಪಂಡಿತರು ದಕ್ಷಿಣ ಯಾತ್ರೆಯಲ್ಲಿ ರಾಮೇಶ್ವರನ ದರ್ಶನಕ್ಕೆ ಹೋಗಿದ್ದರಂತೆ. ಗುಡಿಯ ಬಾಗಿಲು ಮುಚ್ಚಿರಲು ಅಲ್ಲಿಯೇ ನಿಂತು ದರ್ಶನಾರ್ತರಾಗಿ ಈ ಸ್ತುತಿಯನ್ನು ರಚಿಸಿದರು. ಅಷ್ಟರಲ್ಲಿ ಬಾಗಿಲು ತೆರೆದು ಶಿವದರ್ಶನ ದೊರೆಯಿತು. ಇದು ಈ ಸ್ತುತಿಯ ಹಿಂದಿರುವ ಐತಿಹ್ಯ. ಪ್ರತಿನಿತ್ಯ ಶಿವತತ್ತ್ವದ ಸ್ತುತಿ ಮಾಡಲಾಗಿ, ಸಮಸ್ತ ಮಂಗಳಗಳು ಉಂಟಾಗಿ, ಅಮಂಗಳಗಳ ನಿವಾರಣೆಯಾಗಿ, ಜ್ಞಾನ-ಭಕ್ತಿ-ವೈರಾಗ್ಯ ಪ್ರಾಪ್ತಿಯಾಗುವುದು ಶತಸಿದ್ಧ.

ಸ್ಫುಟಂ ಸ್ಫಟಿಕ-ಸಪ್ರಭಂ ಸ್ಫುಟಿತ-ಹಾಟಕ-ಶ್ರೀ-ಜಟಂ
ಶಶಾಂಕ-ದಲ-ಶೇಖರಂ ಕಪಿಲ-ಫುಲ್ಲ-ನೇತ್ರ-ತ್ರಯಮ್ |
ತರಕ್ಷು-ವರ-ಕೃತ್ತಿಮದ್ ಭುಜಗ-ಭೂಷಣಂ ಭೂತಿಮತ್
ಕದಾ ನು ಶಿತಿ-ಕಂಠ ತೇ ವಪುರವೇಕ್ಷತೇ ವೀಕ್ಷಣಮ್ || ೧ ||

ತ್ರಿ-ಲೋಚನ ವಿಲೋಚನೇ ಲಸತಿ ತೇ ಲಲಾಮಾಯಿತೇ
ಸ್ಮರೋ ನಿಯಮ-ಘಸ್ಮರೋ ನಿಯಮಿನಾಮಭೂದ್ ಭಸ್ಮಸಾತ್ |
ಸ್ವ-ಭಕ್ತಿ-ಲತಯಾ ವಶೀಕೃತವತೀ ಸತೀಯಂ ಸತೀ
ಸ್ವ-ಭಕ್ತ-ವಶಗೋ ಭವಾನಪಿ ವಶೀ ಪ್ರಸೀದ ಪ್ರಭೋ || ೨ ||

ಮಹೇಶ ಮಹಿತೋಽಸಿ ತತ್ಪುರುಷ ಪೂರುಷಾಗ್ರ್ಯೋ ಭವಾನ್
ಅಘೋರ ರಿಪು-ಘೋರ ತೇಽನವಮ ವಾಮ-ದೇವಾಂಜಲಿಃ |
ನಮಃ ಸಪದಿ-ಜಾತ ತೇ ತ್ವಮಿತಿ ಪಂಚ-ರೂಪೋಽ೦ಚಿತಃ
ಪ್ರಪಂಚಯ ಚ ಪಂಚ-ವೃನ್ಮಮ ಮನಸ್ತಮಸ್ತಾಡಯ || ೩ ||

ರಸಾ-ಘನರಸಾನಲಾನಿಲ-ವಿಯದ್-ವಿವಸ್ವದ್-ವಿಧು-
ಪ್ರಯಷ್ಟೃಷು ನಿವಿಷ್ಟಮಿತ್ಯಜ ಭಜಾಮಿ ಮೂರ್ತ್ಯಷ್ಟಕಮ್ |
ಪ್ರಶಾಂತಮುತ ಭೀಷಣಂ ಭುವನ-ಮೋಹನಂ ಚೇತ್ಯಹೋ
ವಪೂಂಷಿ ಗುಣ-ಪುಂಷಿ ತೇಽಹಮಹಮಾತ್ಮನೋಽಹಂ-ಭಿದೇ || ೪ ||

ವಿಮುಕ್ತಿ-ಪರಮಾಧ್ವನಾಂ ತವ ಷಡಧ್ವನಾಮಾಸ್ಪದಂ
ಪದಂ ನಿಗಮ-ವೇದಿನೋ ಜಗತಿ ವಾಮದೇವಾದಯಃ |
ಕಥಂಚಿದುಪ-ಶಿಕ್ಷಿತಾ ಭಗವತೈವ ಸಂವಿದ್ರತೇ
ವಯಂ ತು ವಿರಳಾಂತರಾಃ ಕಥಮುಮೇಶ ತನ್ಮನ್ಮಹೇ || ೫ ||

ಕಠೋರಿತ-ಕುಠಾರಯಾ ಲಲಿತ-ಶೂಲಯಾ ಬಾಹಯಾ
ರಣಡ್ಡಮರಯಾ ಸ್ಫುರದ್ಧರಿಣಯಾ ಸ-ಖಟ್ವಾಂಗಯಾ |
ಚಲಭಿರಚಲಾಭಿರಪ್ಯಗಣಿತಾಭಿರುನ್ನೃತ್ಯತಃ
ಚತುರ್ದಶ ಜಗಂತಿ ತೇ ಜಯ-ಜಯೇತ್ಯಯುರ್ವಿಸ್ಮಯಮ್ || ೬ ||

ಪುರು-ತ್ರಿಪುರ-ರಂಧನಂ ವಿವಿಧ-ದೈತ್ಯ-ವಿಧ್ವಂಸನಂ
ಪರಾಕ್ರಮ-ಪರಂಪರಾ ಅಪಿ ಪರಾ ನ ತೇ ವಿಸ್ಮಯಃ |
ಅಮರ್ಷ-ಬಲ-ಹರ್ಷಿತ-ಕ್ಷುಭಿತ-ವೃತ್ತ-ನೇತ್ರೋಜ್ಜ್ವಲ-
ಜ್ವಲಜ್ಜ್ವಲನ-ಹೇಲಯಾ ಶಲಭಿತಂ ಹಿ ಲೋಕ-ತ್ರಯಮ್ || ೭ ||

ಸಹಸ್ರ-ನಯನೋ ಗುಹಃ ಸಹ-ಸಹಸ್ರ-ರಶ್ಮಿರ್ವಿಧುಃ
ಬೃಹಸ್ಪತಿರುತಾತ್ಪತಿಃ ಸ-ಸುರ-ಸಿದ್ಧ-ವಿದ್ಯಾಧರಾಃ |
ಭವತ್-ಪದ-ಪರಾಯಣಾಃ ಶ್ರಿಯಮಿಮಾಮಗುಃ ಪ್ರಾರ್ಥಿನಾಂ
ಭವಾನ್ ಸುರ-ತರುರ್ದೃಶಂ ದಿಶ ಶಿವಾಂ ಶಿವಾ-ವಲ್ಲಭ || ೮ ||

ತವ ಪ್ರಿಯ-ತಮಾದತಿ-ಪ್ರಿಯ-ತಮಂ ಸದೈವಾಂತರಂ
ಪಯಸ್ಯುಪಹಿತಂ ಘೃತಂ ಸ್ವಯಮಿವ ಶ್ರಿಯೋ ವಲ್ಲಭಮ್ |
ವಿಭಿದ್ಯ ಲಘು-ಬುದ್ಧಯಃ ಸ್ವ-ಪರ-ಪಕ್ಷ-ಲಕ್ಷಾಯಿತಂ
ಪಠಂತಿ ಹಿ ಲುಠಂತಿ ತೇ ಶಠ-ಹೃದಃ ಶುಚಾ ಶುಂಠಿತಾಃ || ೯ ||

ವಿಲಾಸ-ನಿಲಯಶ್ಚಿತಾ ತವ ಶಿರಸ್ತತಿರ್ಮಾಲಿಕಾ
ಕಪಾಲಮಪಿ ತೇ ಕರೇ ತ್ವಮಶಿವೋಽಸ್ಯನಂತರ್ಧಿಯಾಮ್ |
ತಥಾಽಪಿ ಭವತಃ ಪದಂ ಶಿವ-ಶಿವೇತ್ಯದೋ ಜಲ್ಪತಾಂ
ಅಕಿಂಚನ ನ ಕಿಂಚನ ವ್ರಜಿನಮಸ್ತ್ಯಭಸ್ಮೀಭವತ್ || ೧೦ ||

ತ್ವಮೇವ ಕಿಲ ಕಾಮ-ಧಕ್ ಸಕಲ-ಕಾಮಮಾ-ಪೂರಯನ್
ಅಪಿ ತ್ರಿ-ನಯನಃ ಸದಾ ವಹಸಿ ಚಾತ್ರಿ-ನೇತ್ರೋದ್ಭವಮ್ |
ವಿಷಂ ವಿಷ-ಧರಾನ್ ದಧತ್ ಪಿಬಸಿ ತೇನ ಚಾಽನಂದವಾನ್
ವಿರುದ್ಧ-ಚರಿತೋಚಿತಾ ಜಗದಧೀಶ ತೇ ಭಿಕ್ಷುತಾ || ೧೧ ||

ನಮಃ ಶಿವ-ಶಿವಾಶಿವಾಶಿವ ಶಿವಾರ್ಧ ಕೃಂತಾಶಿವಂ
ನಮೋ ಹರ ಹರಾಽಹರಾ-ಹರಹರಾಂತರೀಂ ಮೇ ದೃಶಮ್ |
ನಮೋ ಭವ ಭವಾಭವ ಪ್ರಭವ ಭೂತಯೇ ಸಂಪದಾಂ
ನಮೋ ಮೃಢ ನಮೋ-ನಮೋ ನಮ ಉಮೇಶ ತುಭ್ಯಂ ನಮಃ || ೧೨ ||

ಸತಾಂ ಶ್ರವಣ-ಪದ್ಧತಿಂ ಸರತು ಸನ್ನತೋಕ್ತೇತ್ಯಸೌ
ಶಿವಸ್ಯ ಕರುಣಾಂಕುರಾತ್ ಪ್ರತಿ-ಕೃತಾತ್ ಸದಾ ಸೋದಿತಾ |
ಇತಿ ಪ್ರಥಿತ-ಮಾನಸೋ ವ್ಯಧಿತ ನಾಮ ನಾರಾಯಣಃ
ಶಿವ-ಸ್ತುತಿಮಿಮಾಂ ಶಿವಾಂ ಲಿಕುಚ-ಸೂರಿ-ಸೂನುಃ ಸುಧೀಃ || ೧೩ ||

|| ಇತಿ ಶ್ರೀನಾರಾಯಣಪಂಡಿತಾಚಾರ್ಯವಿರಚಿತಾ ಶಿವಸ್ತುತಿಃ ಸಮಾಪ್ತಾ ||

ಪಿಡಿಎಫ್ ಆವೃತ್ತಿ

ಪಿಡಿಎಫ್ ಆವೃತ್ತಿ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s