ಸತ್ಯ ಜಗಕಿದು ಪಂಚ ಭೇದವು (ಶ್ರೀ ಪುರಂದರ ದಾಸರು)

ಸತ್ಯ ಜಗಕಿದು ಪಂಚ ಭೇದವು ನಿತ್ಯ ಶ್ರೀಗೋವಿಂದನ |
ಕೃತ್ಯ ತಿಳಿದು ತಾರತಮ್ಯದಿ ಕೃಷ್ಣನಧಿಕೆಂದು ಸಾರಿರೈ || ಪ ||

ಜೀವ ಈಶಗೆ ಭೇದ ಸರ್ವತ್ರ ಜೀವಜೀವಕೆ ಭೇದವು |
ಜೀವ ಜಡರೊಳ್ ಜಡಜಡಕ್ಕೆ ಭೇದ ಜೀವ ಜಡ ಪರಮಾತ್ಮಗೆ || ೧ ||

ಮಾನುಷೋತ್ತಮರಧಿಕ ಕ್ಷಿತಿಪರು ಮನುಷ್ಯ ದೇವ-ಗಂಧರ್ವರು |
ಜ್ಞಾನಿ-ಪಿತ್ರಾಜಾನ ಕರ್ಮಜ ದಾನವಾರಿ ತತ್ವಾತ್ಮರು || ೨ ||

ಗಣಪಮಿತ್ರರು ಸಪ್ತಋಷಿಗಳು ವಹ್ನಿನಾರದ ವರುಣನು |
ಇನಜಗೆ ಸಮ ಚಂದ್ರಸೂರ್ಯರು ಮನುಸುತೆಯು ಹೆಚ್ಚು ಪ್ರವಾಹನು || ೩ ||

ದಕ್ಷಸಮ ಅನಿರುದ್ಧ ಗುರು ಶಚಿ ರತಿ ಸ್ವಾಯಂಭುವರಾರ್ವರು |
ದಕ್ಷಪ್ರಾಣನಿಂದಧಿಕ ಕಾಮನು ಕಿಂಚಿದಧಕನು ಇಂದ್ರನು || ೪ ||

ದೇವೇಂದ್ರನಿಂದಧಿಕ ಮಹಾರುದ್ರ ರುದ್ರಸಮ ಶೇಷಗರುಡರು |
ಕೇವಲಧಿಕರು ಗರುಡ ಶೇಷಗೆ ದೇವಿ ಭಾರತಿ ಸರಸ್ವತಿ || ೫ ||

ವಾಯುವಿಗೆ ಸಮರಿಲ್ಲ ಜಗದೊಳು ವಾಯುದೇವರೆ ಬ್ರಹ್ಮರು |
ವಾಯು ಬ್ರಹ್ಮಗೆ ಕೋಟಿಗುಣದಿಂದಧಿಕ ಶಕ್ತಳು ಶ್ರೀರಮಾ || ೬ ||

ಅನಂತಗುಣದಿಂದ ಲಕುಮಿಗಿಂತ ಅಧಿಕ ಪುರಂದರವಿಠ್ಠಲನು |
ಘನಸಮರು ಇವಗಿಲ್ಲ ಜಗದೊಳು ಹನುಮಹೃತ್-ಪದ್ಮವಾಸಿಗೆ || ೭ ||

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s