ಆಪತ್ಪರಿಹಾರಕ ಪ್ರಾರ್ಥನಾ ಉಗಾಭೋಗ (ವಿಜಯವಿಠ್ಠಲ ವಿರಚಿತ)

ಒಂದು ಕೈಯಲಿ ಖಡ್ಗ ಒಂದು ಕೈಯಲಿ ಹಲಿಗೆ
ಅಂದವಾಗಿ ಪಿಡಿದುಕೊಂಡು ದಿವಾರಾತ್ರಿಯಲಿ
ಬಂದು ಬದಿಯಲಿ ನಿತ್ಯ ಬಾರಾಸನಾಗಿ ನಿಂದು
ಹಿಂದು ಮುಂದುಪದ್ರವವಾಗದಂತೆ
ಇಂದಿರೆರಮಣ ಕಾಯುತ್ತಲಿರೆ
ಎನಗಾವ ಬಂಧಕಗಳು ಇಲ್ಲ
ಧನ್ಯ ಧನ್ಯ ಕಂದರ್ಪನಯ್ಯಾ ಸಿರಿ ವಿಜಯ ವಿಠ್ಠಲರಾಯ
ದೇವ ಆಪತ್ತು ಬರಲೀಯ ನೋಡಿ ||

ಈ ಮೇಲ್ಕಂಡ ಸ್ತುತಿ(ಉಗಾಭೋಗ)ಯು ಶ್ರೀವಿಜಯದಾಸರ ಕೃತಿಯಾಗಿದ್ದು, ನಿತ್ಯದಲ್ಲಿ ಯಾವುದೇ ಸಂಕಷ್ಟಗಳು ಬಂದಾಗ, ದುಃಖ ಉಂಟಾದಾಗ, ದುಃಸ್ವಪ್ನಗಳು ಆಗುತ್ತಿರುವಾಗ ಪಠಿಸುತ್ತಾ ಇದ್ದರೆ, ಎಲ್ಲ ತಾಪಗಳು ಶೀಘ್ರದಲ್ಲಿ ಪರಿಹಾರವಾಗುತ್ತವೆ. ಕೇವಲ ಕನ್ನಡ ಪದ ಎಂದು ಅನ್ಯಥಾ ತಿಳಿಯಕೂಡದು, ಪ್ರಾಕೃತ ಭಾಷಾ ಸ್ತುತಿಯಾಗಿದ್ದರೂ ಸಹ ಇದು ಮಂತ್ರತುಲ್ಯ ಮತ್ತು ಅಮೋಘ ಫಲಕಾರಿಯಾಗಿರುತ್ತದೆ. ಪಾರಾಯಣದಿಂದ ಯಾರೂ ಇದರ ಅನುಭವವನ್ನು ಪಡೆಯಬಹುದು. ಬಹಳ ಭಯಪಡುವವರಿಗೆ, ಮೇಲಿಂದ ಮೇಲೆ ದುಃಸ್ವಪ್ನಗಳು ಆಗುತ್ತಿರುವವರಿಗೆ ಈ ಪ್ರಾರ್ಥನೆ ವಿಶೇಷ ಫಲಕಾರಿ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s