ವಾಚಕ ವೃಂದಕ್ಕೆ ಹಾರ್ದಿಕ ಅಭಿನಂದನೆಗಳು. ಸ್ತುತಿ,ಸ್ತೋತ್ರಸಾಹಿತ್ಯ ಮತ್ತು ಹರಿದಾಸರ ಕೃತಿಗಳು ನಾವು ನಿತ್ಯ ಪಠಿಸುವ ಭಕ್ತಿರತ್ನಗಳಾಗಿವೆ. ಈ ಸಮೃದ್ಧ ಸಾಹಿತ್ಯವನ್ನು ಪರಿಚಯಿಸುವಲ್ಲಿ “ಸ್ತೋತ್ರ ಸಂಗ್ರಹ” ಒಂದು ಚಿಕ್ಕ ಪ್ರಯತ್ನ. ಅನೇಕ ಚಿಕ್ಕ, ದೊಡ್ಡ ಕೃತಿಗಳನ್ನು ಹಂತ ಹಂತವಾಗಿ ಕೊಡಲಾಗುವುದು. ಮುಂಬರುವ ದಿನಗಳಲ್ಲಿ ಕೆಲವು ಕೃತಿಗಳನ್ನು ಅನುವಾದ ಸಹಿತ ಕೊಡುವ ಇಚ್ಛೆಯಿದೆ. ಭಾವಿಕರು ಈ ಭೂಮಿಯ ಯಾವುದೆ ಭಾಗದಲ್ಲಿ ಇದ್ದರೂ, ಈ ಸ್ತೋತ್ರ ಸಂಗ್ರಹವು ಅವರನ್ನು ತನ್ನ ಸಂಪ್ರದಾಯ, ಪರಂಪರೆಗೆ ಹತ್ತಿರವಾಗಿಸುವಲ್ಲಿ ಸಹಾಯಕವಾಗಿದೆ. ಈ ಪ್ರಯತ್ನದ ಸದುಪಯೋಗವು ಸಜ್ಜನರಿಗೆ ಆಗಬೇಕೆಂಬುದೆ ನನ್ನ ಹಾರ್ದಿಕಾಶಯ.
ವಾಚಕವೃಂದ ಸಲಹೆ, ಸೂಚನೆಗಳನ್ನು ಕೊಟ್ಟು ಪ್ರೋತ್ಸಾಹಿಸಬೇಕು. ನಿಮ್ಮ ಪ್ರೋತ್ಸಾಹ ನನ್ನ ಎಕೈಕ ಅಪೇಕ್ಷೆ. ಯಾವುದೇ ದೋಷಗಳು, ತಪ್ಪುಗಳು, ಪಾಠಾಂತರಗಳು ಗಮನಕ್ಕೆ ಬಂದರೆ ತಕ್ಷಣ ಸೂಚಿಸಬೇಕು. ಇದು ಅತ್ಯವಶ್ಯಕ. ಯಾವುದೇ ವಿಶೇಷ ಕೃತಿಗಳ ಬೇಡಿಕೆಯಿದ್ದರೆ ಸೂಚಿಸಬೇಕು. ನಿಮ್ಮಲ್ಲಿ ಯಾವುದಾದರು ವಿಶಿಷ್ಟ ಕೃತಿಗಳು ಇದ್ದರೆ ಒದಗಿಸಿಕೊಟ್ಟಲ್ಲಿ ಈ ಸಂಗ್ರಹವನ್ನು ಇನ್ನೂ ಸಮೃದ್ಧವಾಗಿಸಲು ಸಹಾಯಕವಾಗುವುದು. ಇತ್ತೀಚಿಗೆ ಅನೇಕ ಹೊಸ ಸಂಗ್ರಹಗಳು ಪ್ರಕಟವಾಗುತ್ತಲಿವೆ. ನೀವು ಅವುಗಳನ್ನು ಸ್ತೋತ್ರಸಂಗ್ರಹಕ್ಕೆ ಪೂರೈಸಿ ಸಹಾಯ ಮಾಡಬಹುದು.
ಸ್ತೋತ್ರ ಸಂಗ್ರಹವನ್ನು ನಿಮ್ಮ ಆಪ್ತೇಷ್ಟರಲ್ಲಿ ಪ್ರಸರಿಸಿ, ಬೆಳೆಸಿ.
ಧನ್ಯವಾದಗಳು – ಹರೇ ಶ್ರೀನಿವಾಸ.







ಎಲ್ಲ ಸ್ತೋತ್ರಗಳ PDF ಆವೃತ್ತಿಯನ್ನು ಸ್ತೋತ್ರಗಳ ಕೊನೆಯಲ್ಲಿ ಸೇರಿಸಲಾಗಿದೆ.
